ADVERTISEMENT

50 ವರ್ಷಗಳ ಹಿಂದೆ: ವಿದೇಶಿ ಒತ್ತಡದ ವಿರುದ್ಧ ಅಲಿಪ್ತ ರಾಷ್ಟ್ರಗಳ ಸಹಕಾರ ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 23:30 IST
Last Updated 18 ಜೂನ್ 2024, 23:30 IST
   

ವಿದೇಶಿ ಒತ್ತಡದ ವಿರುದ್ಧ ಅಲಿಪ್ತ ರಾಷ್ಟ್ರಗಳ ಮಧ್ಯೆ ಸಹಕಾರ ಅಗತ್ಯ

ಢಾಕಾ, ಜೂನ್ 18– ಅಲಿಪ್ತ ರಾಷ್ಟ್ರಗಳ ಪರಸ್ಪರ ನಿಕಟ ಸಹಕಾರವು ವಿದೇಶಿ ಒತ್ತಡ
ಗಳನ್ನು ಮೆಟ್ಟಿ ನಿಲ್ಲುವುದಕ್ಕೆ ಸಹಾಯವಾಗುವುದಲ್ಲದೆ ತಮ್ಮ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಸಂಪೂರ್ಣ ಹತೋಟಿ ಇರಿಸಿಕೊಳ್ಳುವುದಕ್ಕೂ ನೆರವಾಗುವುದೆಂದು ಭಾರತದ ರಾಷ್ಟ್ರಪತಿ ವಿ.ವಿ. ಗಿರಿ ಘೋಷಿಸಿದರು.

ಬಾಂಗ್ಲಾದೇಶದ ವಿಶೇಷ ಪಾರ್‍ಲಿಮೆಂಟ್ ಅಧಿವೇಶನವನ್ನು ಉದ್ದೇಶಿಸಿ, ಆಲ್ಜಿಯರ್ಸ್ ಮತ್ತು ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿ ವಿಶೇಷ ಅಧಿವೇಶನ ನೀಡಿದ ಮಾರ್‍ಗದರ್ಶನದ ಅನುಸಾರ ಅಲಿಪ್ತ ರಾಷ್ಟ್ರಗಳಲ್ಲಿ ಪ್ರಗತಿ ಸಾಧನೆಯ ಔಚಿತ್ಯವನ್ನು ಎತ್ತಿ ಹೇಳಿದರು.

ADVERTISEMENT

ಭಾವೀ ಗುರುಗಳ ‘ದಿವ್ಯ’ ಜ್ಞಾನ

ಶಿವಮೊಗ್ಗ, ಜೂನ್ 18– ಉಪಾಧ್ಯಾಯರ ಸ್ಥಾನಕ್ಕೆ ನೇಮಿಸಲು ಎಸ್‌.ಎಸ್.ಎಲ್‌.ಸಿ. ಪಾಸಾದ ಅಭ್ಯರ್ಥಿಗಳನ್ನು ಇತ್ತೀಚೆಗೆ ಇಲ್ಲಿ ಸಂದರ್ಶನಕ್ಕೆ ಕರೆಯಲಾಗಿತ್ತು.

ಸಂದರ್ಶನದ ಸಮಯದಲ್ಲಿ ಭಾರತದ ಚರಿತ್ರಗೆ ಸಂಬಂಧಿಸಿದಂತೆ ಹಾಕಲಾದ ಪ್ರಶ್ನೆಗಳಿಗೆ ಕೆಲವು ಮಂದಿ ಅಭ್ಯರ್ಥಿಗಳು ನೀಡಿದ ಉತ್ತರ ದಿಗ್ಭ್ರಮೆಯುಂಟುಮಾಡಿತು.

ಡಾ.ಎಸ್. ರಾಧಾಕೃಷ್ಣನ್ ಅವರು ಮೈಸೂರಿನ ದಿವಾನರಾಗಿದ್ದರು ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ‘‘ಡಾ. ರಾಧಾಕೃಷ್ಣನ್ ಅವರು ರಾಜ್ಯದ ಆಹಾರ ಮಂತ್ರಿಗಳೂ ಸಹ ಆಗಿದ್ದರು’’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.