ADVERTISEMENT

50 ವರ್ಷಗಳ ಹಿಂದೆ: ಎರಡು ವರ್ಷಗಳಲ್ಲಿ ಮತ್ಸ್ಯ ಬಂದರಾಗಿ ಹೊನ್ನಾವರ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 23:30 IST
Last Updated 19 ಜೂನ್ 2024, 23:30 IST
   

ಬೆಂಗಳೂರು, ಜೂ. 1– ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಂದರನ್ನು 46 ಲಕ್ಷ ರೂಪಾಯಿ ವೆಚ್ಚದಲ್ಲಿ ಮತ್ಸ್ಯ ಬಂದರನ್ನಾಗಿ ಅಭಿವೃದ್ಧಿಗೊಳಿಸುವ ಕಾರ್ಯ ಎರಡು ವರ್ಷಗಳಲ್ಲಿ ಮುಗಿಯಲಿದೆ.

ಈ ಯೋಜನೆಯ ತ್ವರಿತ ಅನುಷ್ಠಾನದ ಕಾರ್ಯಕ್ರಮ ರೂಪಿಸಲು ಇಂದು ಮೀನುಗಾರಿಕೆ ಇಲಾಖೆ ಸಚಿವ ಶ್ರೀ ಕೆ.ಟಿ. ರಾಥೋಡ್‌ ಅವರ ಕೊಠಡಿಯಲ್ಲಿ ನಡೆದ ವರಿಷ್ಠ ಅಧಿಕಾರಿಗಳ ಸಭೆಯಲ್ಲಿ ಈ ವರ್ಷ ಕನಿಷ್ಠ ಹತ್ತು ಲಕ್ಷ ರೂಪಾಯಿಗಳನ್ನು ಖರ್ಚು ಮಾಡುವ ರೂಪರೇಷೆ ತಯಾರಿಸಲಾಯಿತು.

ಮೀನು ದೋಣಿಗಳು ಲಂಗರುಹಾಕುವ ಸ್ಥಳದ ನಿರ್ಮಾಣ, ನೀರು ಪೂರೈಕೆ, ದೋಣಿಗಳ ಆಗಮನ ನಿರ್ಗಮನ ಸೌಲಭ್ಯಗಳ ನಿರ್ಮಾಣಕಾರ್ಯವನ್ನು ಈ ವರ್ಷ ಎತ್ತಿಕೊಳ್ಳಲಾಗುವುದು ಎಂದು ಶ್ರೀ ರಾಥೋಡ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ADVERTISEMENT

ಬಂದರು ನಿರ್ಮಾಣಕ್ಕೆ ಬೇಕಾದ ಜಮೀನನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಇನ್ನಿತರ ಚಿಕ್ಕಪುಟ್ಟ ಅಡೆತಡೆಗಳ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

ನ್ಯಾಷನಲ್‌ ಕಾಲೇಜಿಗೆ ಅತ್ಯಧಿಕ ರ‍್ಯಾಂಕ್‌ 

ಬೆಂಗಳೂರು, ಜೂನ್‌ 19– ಪಿಯುಸಿ ಶಿಕ್ಷಣ ಮಂಡಳಿ ಆಶ್ರಯದಲ್ಲಿ ಈ ಸಲ ಜರುಗಿದ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ನಗರದ ನ್ಯಾಷನಲ್‌ ಕಾಲೇಜು ಅತ್ಯಧಿಕ ರ‍್ಯಾಂಕುಗಳನ್ನು ಗಳಿಸಿಕೊಂಡಿದೆ.

ಈ ಎರಡೂ ಪರೀಕ್ಷೆಗಳಲ್ಲಿ (ಆರ್ಸ್‌, ಸೈನ್ಸ್‌, ಕಾಮರ್ಸ್‌) ಬಂದಿರುವ ಒಟ್ಟು 60 ರ‍್ಯಾಂಕ್‌ಗಳ ಪೈಕಿ 12 ರ‍್ಯಾಂಕ್‌ಗಳನನ್ನು ನ್ಯಾಷನಲ್‌ ಕಾಲೇಜು ಪಡೆದುಕೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.