ADVERTISEMENT

50 ವರ್ಷಗಳ ಹಿಂದೆ | ಹಕ್ಸರ್‌ಗೆ ಯೋಜನಾ ಖಾತೆ ಸಂಭವ; ಧರ್ ಮಾಸ್ಕೊದಲ್ಲಿ ರಾಯಭಾರಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 23:30 IST
Last Updated 7 ಅಕ್ಟೋಬರ್ 2024, 23:30 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ನವದೆಹಲಿ, ಅ. 7– ಪ್ರಧಾನ ಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಎನ್. ಹಕ್ಸರ್ ಅವರನ್ನು ಯೋಜನಾ ಸಚಿವರನ್ನಾಗಿ ನೇಮಕ ಮಾಡುವ ಸಂಭವವಿದೆ.

ಈಗ ಯೋಜನಾ ಸಚಿವರಾಗಿರುವ ಡಿ.ಪಿ. ಧರ್ ಅವರನ್ನು ಕೆ.ಎಸ್. ಶೆಲ್ಪಂಕರ್ ಅವರ ಸ್ಥಾನದಲ್ಲಿ ಮಾಸ್ಕೊದಲ್ಲಿ ಭಾರತದ ರಾಯಭಾರಿಯನ್ನಾಗಿ ನೇಮಕ ಮಾಡಲಾಗುವುದು ಎಂದು ತಿಳಿದುಬಂದಿದೆ.

ಅಬಕಾರಿ ಸುಂಕಗಳ್ಳರ ಮೇಲೆ ಕಣ್ಣು

ADVERTISEMENT

ನವದೆಹಲಿ, ಅ.7– ಕೇಂದ್ರ ಅಬಕಾರಿ ಸುಂಕಗಳ್ಳತನವನ್ನು ತಡೆಯಲು ಬಿರುಸಿನ ಕ್ರಮ ಕೈಗೊಳ್ಳುವ ಬಗ್ಗೆ ಹಣಕಾಸು ಸಚಿವ ಖಾತೆ ಪರಿಶೀಲಿಸುತ್ತಿದೆ. ಕಳ್ಳಸಾಗಣೆದಾರರನ್ನು ಸದೆಬಡಿಯುವ ಕ್ರಮಗಳು ಮುಂದುವರಿಯುತ್ತಿರುವಂತೆಯೇ ಕೇಂದ್ರ ಸರ್ಕಾರವು ಸುಂಕಗಳ್ಳರನ್ನು ಪತ್ತೆಹಚ್ಚಿ ಶಿಕ್ಷಿಸುವ ಆಲೋಚನೆಯಲ್ಲಿದೆ. ಎಲ್ಲ ಆರ್ಥಿಕ ಅಪರಾಧಗಳಿಗೆ ಉಗ್ರ ಶಿಕ್ಷೆ ವಿಧಿಸುವಂತೆ ಕಾನೂನು ಆಯೋಗವು ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.