ರಾಯಪುರಂ ಯಾರ್ಡಿನ 500 ಟನ್ ದ್ವಿದಳ ಧಾನ್ಯ ಸರ್ಕಾರದ ಸ್ವಾಧೀನಕ್ಕೆ
ಮದ್ರಾಸ್, ಅ. 9– ರಾಯಪುರಂ ರೈಲ್ವೆ ಯಾರ್ಡುಗಳಲ್ಲಿ ಸಗಟು ವರ್ತಕರು ಎರಡು ವಾರಗಳಿಂದ ಬಿಟ್ಟಿರುವ 500 ಟನ್‌ಗಳಷ್ಟು ಆಹಾರಧಾನ್ಯಗಳನ್ನು ತಮಿಳುನಾಡು ಸರ್ಕಾರ ಸ್ವಾಧೀನಪಡಿಸಿಕೊಳ್ಳುತ್ತದೆ.
ಅಗತ್ಯ ವಸ್ತುಗಳ ಶಾಸನದ ಮೇರೆಗೆ ವಶಪಡಿಸಿಕೊಳ್ಳುತ್ತಿರುವುದು ಇದೇ ಮೊದಲು.
ಕೆಪಿಸಿಸಿ ಅಧ್ಯಕ್ಷತೆಗೆ ಶನಿವಾರ ಸ್ಪರ್ಧಿ ಆಯ್ಕೆ: ಅರಸು ಅವರಿಗೆ ಅಧಿಕಾರ
ಬೆಂಗಳೂರು, ಅ. 9– ಶನಿವಾರ ನಗರಕ್ಕೆ ಆಗಮಿಸಲಿರುವ ಕೇಂದ್ರ ಗೃಹ ಮಂತ್ರಿ ಉಮಾಶಂಕರ ದೀಕ್ಷಿತ್ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮರಗತಂ ಚಂದ್ರಶೇಖರ್ ಅವರೊಡನೆ ಸಮಾಲೋಚಿಸಿದ ನಂತರ ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಯಾರಾಗಬೇಕೆಂಬುದನ್ನು ನಿರ್ಧರಿಸಲಿದ್ದಾರೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗಾಗಿ ಪ್ರದೇಶ ಸಮಿತಿಯು ಭಾನುವಾರ 11.30ಕ್ಕೆ ಬಸವನಗುಡಿಯ ವಾಸವಿ ಧರ್ಮಶಾಲೆಯಲ್ಲಿ ಸಮಾವೇಶಗೊಳ್ಳಲಿದ್ದು, ಈಗಿನ ಅಧ್ಯಕ್ಷ ಕೆ.ಎಚ್.ರಂಗನಾಥ್ ತಮ್ಮ ರಾಜೀನಾಮೆಯನ್ನು ಎಐಸಿಸಿ ಅಧ್ಯಕ್ಷರಿಗೆ ಕಳುಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.