ADVERTISEMENT

50 ವರ್ಷಗಳ ಹಿಂದೆ | ಕೆ.ಎಚ್‌. ಪಾಟೀಲ್‌ಗೆ ಬಹುಜನರ ಬೆಂಬಲ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2024, 23:30 IST
Last Updated 12 ಅಕ್ಟೋಬರ್ 2024, 23:30 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಬೆಂಗಳೂರು, ಅ.12– ಸದಸ್ಯರ ಅಭಿಪ್ರಾಯ ಸಂಗ್ರಹ ಮುಕ್ತಾಯ ಘಟ್ಟಕ್ಕೆ ಬರುತ್ತಿದ್ದಂತೆ ಕೆ.ಪಿ.ಸಿ.ಸಿ ಅಧ್ಯಕ್ಷ ಗಾದಿಗೆ ಆಹಾರ ಸಚಿವ ಕೆ.ಎಚ್‌. ಪಾಟೀಲ್‌ ಅವರ ಪರವಾಗಿ ಪ್ರದೇಶ ಕಾಂಗ್ರೆಸ್‌ ಸದಸ್ಯರಲ್ಲಿ ಬಹುಸಂಖ್ಯಾತರು ಬೆಂಬಲ ನೀಡಿದ್ದು, ನಾಳೆ ನಡೆಯಲಿರುವ ಅಧ್ಯಕ್ಷ ಚುನಾವಣೆಯಲ್ಲಿ ಪಾಟೀಲರ ಆಯ್ಕೆ ಬಹುತೇಕ ಖಚಿತವಾಗಿದೆ.

ಎ.ಐ.ಸಿ.ಸಿ ವಿಶೇಷ ವೀಕ್ಷಕರಾದ ಕೇಂದ್ರ ಸಚಿವ ಉಮಾಶಂಕರ್ ದೀಕ್ಷಿತ್‌ ಅವರು ಪ್ರತಿಯೊಬ್ಬ ಕೆ.ಪಿ.‌ಸಿ.ಸಿ. ಸದಸ್ಯರನ್ನು ಕರೆಸಿ, ಚೀಟಿಯಲ್ಲಿ ಅವರ ಅಭಿಮತ‌ದ ಅಭ್ಯರ್ಥಿಯ ಹೆಸರನ್ನು ಬರಹದಲ್ಲಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT