ADVERTISEMENT

50 ವರ್ಷಗಳ ಹಿಂದೆ | ಸೋಮವಾರ, 3–8–1970

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 19:30 IST
Last Updated 2 ಆಗಸ್ಟ್ 2020, 19:30 IST

ಬೆಲೆ, ಸಂಗ್ರಹಣ ನೀತಿಯ ತುರ್ತು ವಿಮರ್ಶೆಗೆ ಕರೆ

ನವದೆಹಲಿ, ಆ. 2– ಏರುತ್ತಿರುವ ಬೆಲೆಗಳನ್ನು ಹತೋಟಿಯಲ್ಲಿಡಲು ಸರ್ಕಾರದ ಬೆಲೆ ಮತ್ತು ಸಂಗ್ರಹಣ ನೀತಿಯನ್ನು ತುರ್ತಾಗಿ ಪುನರ್ವಿಮರ್ಶಿಸುವುದು ಅಗತ್ಯವೆಂದು ಕೇಂದ್ರ ಅರ್ಥ ಖಾತೆಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆಂದು ಗೊತ್ತಾಗಿದೆ.

ಆಹಾರ ಧಾನ್ಯಗಳಿಗೆ ಸರ್ಕಾರ ಹೆಚ್ಚು ಬೆಲೆ ಗೊತ್ತುಪಡಿಸಿರುವುದು ಆಹಾರ ಧಾನ್ಯಗಳಿಗೆ ಈಗ ಹೆಚ್ಚು ಬೆಲೆ ಇರುವುದಕ್ಕೆ ಕಾರಣ.

ADVERTISEMENT

ಆಹಾರ ಧಾನ್ಯಗಳ ಸಂಗ್ರಹಣೆಯು ನಿರೀಕ್ಷೆಗಿಂತ ಕಡಿಮೆಯಾಗುವುದು. ಆಹಾರ ಧಾನ್ಯಗಳ ಬೆಂಬಲದ ಬೆಲೆ ತಗ್ಗಿಸಬೇಕೆಂದು ತಜ್ಞರ ಅಭಿಮತ.

ರಾಜಧನ ರದ್ದು ಶಾಸನ ಜಾರಿಗೆ ಸಹಕಾರ: ಮಾಜಿ ಅರಸರಿಗೆ ಪ್ರಧಾನಿ ಮನವಿ

ನವದೆಹಲಿ, ಆ. 2– ಸಂಸತ್ತಿನ ಪ್ರಸಕ್ತ ಮುಂಗಾರು ಅಧಿವೇಶನದಲ್ಲೇ ರಾಜಧನ ರದ್ದತಿ ಕುರಿತ ಶಾಸನ ಅಂಗೀಕೃತವಾಗು
ವಂತೆ ಮಾಡಲು ಎಲ್ಲ ಸಹಕಾರ ನೀಡಬೇಕೆಂದು ಪ್ರಧಾನಿ ಇಂದಿರಾ ಗಾಂಧಿ ಅವರು ಮಾಜಿ ರಾಜರುಗಳನ್ನು ಕೋರಿದ್ದಾರೆ.

ರಾಜಧನ ಮತ್ತಿತರ ಸೌಲಭ್ಯಗಳ ನೀಡಿಕೆಯು ಸಮಾಜವಾದಿ ಸಮಾಜ ರಚನೆ ಹಿನ್ನೆಲೆಯಲ್ಲಿ ಕಾಲಧರ್ಮಕ್ಕೆ ಅನುಗುಣ
ವಾಗಿರುವುದಿಲ್ಲ ಎಂದೂ ಸೂಚಿಸಿದ್ದಾರೆ.

ಪ್ರಧಾನಿಯವರು ಈ ಬಗ್ಗೆ ಎರಡು ದಿನಗಳ ಹಿಂದೆ ಎಲ್ಲ ಮಾಜಿ ರಾಜರಿಗೂ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.