ADVERTISEMENT

ಬುಧವಾರ 22.6.1994

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 19:45 IST
Last Updated 21 ಜೂನ್ 2019, 19:45 IST
   

ಜನತಾದಳ ಮತ್ತೆ ಇಬ್ಭಾಗ

ನವದೆಹಲಿ, ಜೂನ್‌ 21– ಲೋಕಸಭೆಯಲ್ಲಿ 39 ಸದಸ್ಯಬಲವುಳ್ಳ ಜನತಾದಳದಲ್ಲಿನ 14 ಮಂದಿ ಸದಸ್ಯರು ಇಂದು ಸ್ಪೀಕರ್‌ ಶಿವರಾಜ್ ಪಾಟೀಲ್‌ ಅವರನ್ನು ಭೇಟಿಯಾಗಿ ತಮಗೆ ಲೋಕಸಭೆಯಲ್ಲಿ ಪ್ರತ್ಯೇಕ ಸ್ಥಾನಗಳನ್ನು ನೀಡಬೇಕೆಂಬ ಮನವಿಯನ್ನು ಸಲ್ಲಿಸಿದ್ದರಿಂದ, ಭಿನ್ನಮತ ಮತ್ತು ಒಡಕಿಗೆ ಒಳಗಾದ ಜನತಾದಳವು ರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಇಬ್ಭಾಗವಾಯಿತು. ಇಂದಿನ ಬೆಳವಣಿಗೆಯ ಪರಿಣಾಮವಾಗಿ ರಾಜ್ಯಗಳಲ್ಲೂ ದಳ ಒಡೆಯುವ ಸಾಧ್ಯತೆಯೇ ಹೆಚ್ಚು.

ಗುಂಪಿನ ಪ್ರಮುಖ ನಾಯಕರಾದ ಜಾರ್ಜ್‌ ಫರ್ನಾಂಡೀಸ್‌ ಅವರು ‘ಪ್ರಜಾವಾಣಿ’ ಜೊತೆ ಮಾತನಾಡುತ್ತಾ, ಜನತಾದಳ ಒಂದು ರಾಷ್ಟ್ರೀಯ ಪಕ್ಷವಾಗಿ ಉಳಿದು ಬೆಳೆಯಲು ಯಾರೂ ಕೆಲಸ ಮಾಡಲು ತಯಾರಿಲ್ಲದ ಸ್ಥಿತಿಯಲ್ಲಿ ತಾವು ಸುಮ್ಮನೆ ಕೂಡಲು ಸಾಧ್ಯವಿರಲಿಲ್ಲ ಎಂದರು.

ADVERTISEMENT

ಮೇಯರ್‌ ಚುನಾವಣೆ ಕಾವು

ಬೆಂಗಳೂರು, ಜೂನ್‌ 21– ಬೆಂಗಳೂರು ಮಹಾನಗರ ಪಾಲಿಕೆಯ ಪ್ರಸಕ್ತ ಅವಧಿಯ ಅಂತಿಮ ವರ್ಷದ ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆ ಇದೀಗ ನಿಧಾನವಾಗಿ ಕಾವೇರತೊಡಗಿದೆ.

ಈ ತಿಂಗಳ 27ರಂದು ನಡೆಯಲಿರುವ ಚುನಾವಣೆಯಲ್ಲಿ ಮೇಯರ್‌ ಹುದ್ದೆ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಸ್ಪರ್ಧೆಗಿಳಿಯುವ ಸಲುವಾಗಿ ಕಸರತ್ತು ನಡೆಸುತ್ತಿದ್ದಾರೆ.

ಮುಂದಿನ ವರ್ಷ ಚುನಾವಣಾ ವರ್ಷ ಆಗಿರುವುದರಿಂದ ಪಕ್ಷದ ಭವಿಷ್ಯದ ದೃಷ್ಟಿಯಿಂದ ಮೇಯರ್‌ ಸ್ಥಾನವನ್ನು ಯಾರಿಗೆ ನೀಡಬೇಕು ಎಂಬ ಸಮಸ್ಯೆ ಕಾಂಗ್ರೆಸ್‌ ಪಕ್ಷವನ್ನು ಕಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.