ಕಾವೇರಿ ಜಲವಿವಾದ: ಒಳಸಂಚಿನ ಶಂಕೆ
ಮೈಸೂರು, ಸೆಪ್ಟೆಂಬರ್ 17– ಕಾವೇರಿ ಜಲವಿವಾದದ ಸಂಬಂಧದಲ್ಲಿ ಸಂಬಂಧಿಸಿದ ಮೂವರು ಮುಖ್ಯಮಂತ್ರಿಗಳು ಸಭೆ ಸೇರಿ ವಿಷಯ ಸಂಗ್ರಹಣೆಗೆ ತಾಂತ್ರಿಕ ಸಮಿತಿ ನೇಮಕ ಮಾಡಿದ ಬಗ್ಗೆ ಇಂದು ಇಲ್ಲಿ ಪ್ರಸ್ತಾಪಿಸಿದ ಎಂ.ಪಿ.ಸಿ.ಸಿ. (ಸಂಸ್ಥಾ) ಅಧ್ಯಕ್ಷ ವೀರೇಂದ್ರ ಪಾಟೀಲ್ ಅವರು ಬಲವಾದ ಶಂಕೆ ವ್ಯಕ್ತಪಡಿಸಿ, ‘ಏನೋ ಒಳಸಂಚು ನಡೆದಿದೆ’ ಎಂದು ಆರೋಪಿಸಿದರು.
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ‘ಅಹುಜ ಶಂಕಿಸಿದಂತೆ ಏನೋ ನಡೆದಿದೆ. ಅದರಿಂದಲೇ ಕಾವೇರಿ ಪಾತ್ರದ ನೀರಾವರಿ ಯೋಜನೆಗಳ ಕೆಲಸ ನಿಧಾನವಾ ಗಿರಬಹುದೆಂದು ಶಂಕಿಸಿ, ಅಂತಿಮವಾಗಿ ಈ ಜಲವಿವಾದವನ್ನು ಪ್ರಧಾನಿ ಇಂದಿರಾಗಾಂಧಿ ಅವರ ತೀರ್ಮಾನಕ್ಕೆ ಬಿಡುವ ಹಾಗೆ ಕಾಣುತ್ತಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.