ADVERTISEMENT

25 ವರ್ಷಗಳ ಹಿಂದೆ | ಪ್ರಬಲ ದಾಳಿ: 6 ಯೋಧರು ಹುತಾತ್ಮ, 31 ಉಗ್ರರ ಸಾವು

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 23:33 IST
Last Updated 3 ಜೂನ್ 2024, 23:33 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಜಮ್ಮು, ಜೂನ್ 3: ಅತಿಕ್ರಮಣಕಾರರ ಮೇಲೆ ನಡೆದ ಸತತ 9ನೇ ದಿನದ ದಾಳಿ ಹಾಗೂ ಪಾಕ್ ಬೆಂಬಲಿತ ಉಗ್ರರ ಪ್ರತಿದಾಳಿಯಿಂದಾಗಿ ಇಂದು ಭಾರತದ ಲೆಫ್ಟಿನೆಂಟ್ ಕರ್ನಲ್ ಆರ್. ವಿಶ್ವನಾಥನ್, ಕ್ಯಾಪ್ಟನ್ ಪಿ.ವಿ. ವಿಕ್ರಂ ಸೇರಿದಂತೆ ಆರು ಮಂದಿ ಸೇನಾ ಸಿಬ್ಬಂದಿ ಹುತಾತ್ಮರಾದರೆ, 31 ಮಂದಿ ಅತಿಕ್ರಮಣಕಾರರು ಗುಂಡಿಗೆ ಬಲಿಯಾಗಿದ್ದಾರೆ.

ಕಕ್ಸರ್ ಉಪವಲಯದಲ್ಲಿ ಫಿರಂಗಿ ದಳಕ್ಕೆ ಸೂಚನೆ ನೀಡುತ್ತಿದ್ದ ಕ್ಯಾಪ್ಟನ್ ಪಿ.ವಿ. ವಿಕ್ರಂ ಅವರು ಪಾಕ್ ದಾಳಿಗೆ ತುತ್ತಾದರು. ಡ್ರಾಸ್ ಉಪವಲಯದಲ್ಲಿ ದಾಳಿಯ ನೇತೃತ್ವ ವಹಿಸಿದ್ದ ಲೆಫ್ಟಿನೆಂಟ್ ಕರ್ನಲ್ ಆರ್. ವಿಶ್ವನಾಥನ್ ಅವರು ಉಗ್ರರ ಗುಂಡಿಗೆ ಬಲಿಯಾದರೂ, ಉಗ್ರರ ನೆಲೆಯನ್ನು ವಶಪಡಿಸಿಕೊಳ್ಳುವಲ್ಲಿ ಸೇನೆ ಯಶ ಕಂಡಿದೆ.

ನಚಿಕೇತ ಬಿಡುಗಡೆ

ADVERTISEMENT

ಇಸ್ಲಾಮಾಬಾದ್, ಜೂನ್ 3: ಭಾರತದ ವಿಮಾನ ಪೈಲಟ್ ಲೆಫ್ಟಿನೆಂಟ್ ಕೆ. ನಚಿಕೇತ ಅವರನ್ನು ಎಂಟು ದಿನಗಳ ಬಂಧನದ ನಂತರ ಇಂದು ರಾತ್ರಿ ಬಿಡುಗಡೆ ಮಾಡಿ ಭಾರತದ ಹೈಕಮಿಷನರ್ ಜಿ. ಪಾರ್ಥಸಾರಥಿ ಅವರಿಗೆ ಒಪ್ಪಿಸಲಾಯಿತು.

ನಚಿಕೇತ ಅವರನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡುವುದಕ್ಕೆ ಪಾರ್ಥಸಾರಥಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ, ಪಾಕಿಸ್ತಾನದ ವಿದೇಶಾಂಗ ಕಾರ್ಯಾಲಯದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಪ್ರತಿನಿಧಿಗಳಿಗೆ ರಾತ್ರಿ 11ಕ್ಕೆ ಅವರನ್ನು ಒಪ್ಪಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.