ADVERTISEMENT

25 ವರ್ಷಗಳ ಹಿಂದೆ: ಸಾವಿರಾರು ಸಾವು? ಪರಿಹಾರಕ್ಕೆ 500 ಕೋಟಿ ಅಗತ್ಯ

(01/11/1999, ಸೋಮವಾರ)

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 18:50 IST
Last Updated 31 ಅಕ್ಟೋಬರ್ 2024, 18:50 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಸಾವಿರಾರು ಸಾವು?, 25 ಲಕ್ಷ ಮನೆ ನಾಶ; ಪರಿಹಾರಕ್ಕೆ 500 ಕೋಟಿ ಅಗತ್ಯ

ಭುವನೇಶ್ವರ, ಅ.31 (ಪಿಟಿಐ)– ಶತಮಾನದ ಅತಿ ದೊಡ್ಡ ನೈಸರ್ಗಿಕ ದುರಂತವೆಂದು ಬಣ್ಣಿಸಲಾಗುತ್ತಿರುವ ಒರಿಸ್ಸಾದ ಚಂಡಮಾರುತಕ್ಕೆ ಸಾವಿರಾರು ಜನರು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಲಕ್ಷಾಂತರ ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಸಂಪರ್ಕ ಮತ್ತು ರೈಲು ಮಾರ್ಗಗಳನ್ನು ಸರಿಪಡಿಸಲು ಶತಾಯಗತಾಯ ಯತ್ನಿಸುತ್ತಿರುವ ಒರಿಸ್ಸಾ ಸಾಮಾನ್ಯ ಸ್ಥಿತಿಗೆ ಮರಳಲು ಪರದಾಡುತ್ತಿದೆ.

ADVERTISEMENT

ಚಂಡಮಾರುತಕ್ಕೆ ಕನಿಷ್ಠ ಮೂರು ಸಾವಿರ ಮಂದಿ ಸತ್ತಿರಬಹುದು ಎಂದು ಕೆಲವೊಂದು ಮೂಲಗಳು ಅಂದಾಜಿಸಿವೆ. ಆದರೆ ಇದನ್ನು ಒಪ್ಪಿಕೊಳ್ಳಲು ರಾಜ್ಯದ ಮುಖ್ಯಮಂತ್ರಿ ಗಿರಿಧರ್ ಗಮಾಂಗ್‌ ಅವರು ಸಿದ್ಧರಿಲ್ಲ.

ಗಮಾಂಗ್‌ ಅವರು ಇಂದು ಕಂದಾಯ ಸಚಿವ ಜಗನ್ನಾಥ್‌ ಪಟ್ನಾಯಕ್‌ ಅವರೊಂದಿಗೆ ಚಂಡಮಾರುತ ಪೀಡಿತ ಪ್ರದೇಶಗಳಿಗೆ ವೈಮಾನಿಕ ಸಮೀಕ್ಷೆ ನಡೆಸಿದರು. ‘ಕೇಂದ್ರಪಾರ ಜಿಲ್ಲೆಯೊಂದರಲ್ಲಿಯೇ 150 ಜನರು ಸತ್ತಿದ್ದಾರೆಂದು ಊಹಿಸಲಾಗಿದೆ, ಕಟಕ್‌ ಮತ್ತು ಖರ್ಡಾ ಜಿಲ್ಲೆಗಳಲ್ಲಿ 22 ಮಂದಿ ಸತ್ತಿದ್ದಾರೆ’ ಎಂದು ಗಮಾಂಗ್‌ ಸುದ್ದಿಗಾರರಿಗೆ ತಿಳಿಸಿದರು.

ಪರಿಹಾರ ಕಾರ್ಯಕ್ಕಾಗಿ ರಾಜ್ಯಕ್ಕೆ ಕನಿಷ್ಠ 500 ಕೋಟಿ ರೂಪಾಯಿಗಳಾದರೂ ಬೇಕಾಗುತ್ತದೆ ಎಂದು ಅವರು ಹೇಳಿದರು.

–––

ವಿಮಾನ ಅಪಘಾತ: 214 ಮಂದಿ ಸಾವು

ಕೈರೊ, ಅ.31 (ಪಿಟಿಐ)– ಪೂರ್ವ ಅಮೆರಿಕದ ಅಟ್ಲಾಂಟಿಕ್‌ ಸಾಗರದ ಮೇಲೆ ಹಾರುತ್ತಿದ್ದ ಈಜಿಪ್ಟ್‌ನ ನಾಗರಿಕ ವಿಮಾನವೊಂದು ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ ಎಲ್ಲ 214 ಮಂದಿಯೂ ಮೃತಪ್ಟಿದ್ದಾರೆ ಎಂದು ಶಂಕಿಸಲಾಗಿದೆ. ವಿಮಾನದ ಅವಶೇಷ ಹಾಗೂ ಒಂದು ಮೃತದೇಹ ಸಮೀಪದ ದ್ವೀಪದಲ್ಲಿ ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.