ಮಾಹಿತಿ ತಂತ್ರಜ್ಞಾನ: ಹೆಬ್ಬಾಗಿಲು ತೆರೆದ ಕರ್ನಾಟಕ
ಬೆಂಗಳೂರು, ನ. 1– ರಾಷ್ಟ್ರದಲ್ಲೇ ಮುಂಚೂಣಿಯಲ್ಲಿರುವ ತಂತ್ರಜ್ಞಾನ ಕ್ಷೇತ್ರಕ್ಕೆ ಮತ್ತಷ್ಟು ಪ್ರೋತ್ಸಾಹ ಕ್ರಮಗಳ ಹೆಬ್ಬಾಗಿಲನ್ನು ರಾಜ್ಯ ಸರ್ಕಾರ ತೆರೆಯಿತು.
ರಾಜಧಾನಿಯಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಕಾರಿಡಾರ್ ಸ್ಥಾಪನೆ, ಕನ್ನಡ ಸಾಫ್ಟ್‌ವೇರ್ ಬೆಳವಣಿಗೆಗೆ ಉತ್ತೇಜನ, ಎಲೆಕ್ಟ್ರಾನಿಕ್ಸ್ ನಗರದಲ್ಲಿ ಪ್ರಾರಂಭಿಸಲಾಗುವ ಎಲ್ಲ ತಂತ್ರಜ್ಞಾನ ಘಟಕಗಳಿಗೂ ಸ್ಟಾಂಪ್ ಶುಲ್ಕದಲ್ಲಿ ವಿನಾಯಿತಿ– ಇವು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಘೋಷಿಸಿದ ಹೊಸ ಮಾಹಿತಿ ತಂತ್ರಜ್ಞಾನ ನೀತಿಯಲ್ಲಿಯ ಪ್ರಮುಖ ಅಂಶಗಳು.
ಇಲ್ಲಿಯ ಎಲೆಕ್ಟ್ರಾನಿಕ್ಸ್ ನಗರದಲ್ಲಿ ರಾಜ್ಯೋತ್ಸವದ ದಿನವಾದ ಇಂದು ಪ್ರಾರಂಭವಾಗಿರುವ ಮಾಹಿತಿ ತಂತ್ರಜ್ಞಾನದ ಎರಡನೇ ಬೃಹತ್ ಪ್ರದರ್ಶನ ‘ಬೆಂಗಳೂರು ಐಟಿ ಡಾಟ್ ಕಾಂ–99’ ಉದ್ಘಾಟಿಸಿದ ಕೃಷ್ಣ ಅವರು, ಮಾಹಿತಿ ತಂತ್ರಜ್ಞಾನದ ಬೆಳವಣಿಗೆಗೆ ಅಗತ್ಯವಾದ ಅನೇಕ ಹೊಸ ಕಾರ್ಯಕ್ರಮಗಳನ್ನು ಘೊಷಿಸಿದಾಗ ಜನಸ್ತೋಮದಿಂದ ಕರತಾಡನ ಕೇಳಿಬಂತು.
ವೀರಪ್ಪನ್ ಸಹಚ ಸೆರೆ
ಕೊಯಮತ್ತೂರ್, ನ. 1 (ಯುಎನ್‌ಐ)– ಕುಖ್ಯಾತ ಕಾಡುಗಳ್ಳ ವೀರಪ್ಪನ್ ಸಹಚರ ಎಂದು ಶಂಕಿಸಲಾದ ಒಬ್ಬನನ್ನು ವಿಶೇಷ ಕಾರ್ಯಪಡೆಯು ಇಂದು ತಮಿಳುನಾಡಿನ ಈರೋಡ್ ಜಿಲ್ಲೆಯ ಮಕ್ಕಂಪಳಯಂ ಅರಣ್ಯ ಪ್ರದೇಶದಲ್ಲಿ ಬಂಧಿಸಿದೆ. ಬಾಲು ವೀರಪ್ಪನ್‌ನನ್ನು (35) ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಎಸ್‌ಟಿಎಫ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.