ಎಚ್.ಎ.ಎಲ್. ಬಿ.ಎಂ.ಟಿ.ಸಿ. ಬಸ್ಸು ನಿಲುಗಡೆಯ ಸ್ಥಳದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಮೊದಲಿದ್ದ ಗ್ರಾನೈಟ್ ಕಲ್ಲಿನ ಬೆಂಚುಗಳನ್ನು ತೆಗೆದು, ಹೊಸದಾಗಿ ಕಬ್ಬಿಣದ ಆಧುನಿಕ ಸೀಟುಗಳನ್ನು ಅಳವಡಿಸಿ ಹೊಸ ತಂಗುದಾಣಗಳನ್ನು ನಿರ್ಮಿಸಿದ್ದಾರೆ. ಆದರೆ ಸೀಟುಗಳು ಬಹಳ ಎತ್ತರವಿದ್ದು, ಅವನ್ನು ಏರಿ ಕುಳಿತುಕೊಳ್ಳಬೇಕು. ಕೂತಾಗ ನೆಲದ ಮೇಲೆ ಇರಬೇಕಾದ ಕಾಲುಗಳು ನೆಲದಿಂದ ಒಂದು ಅಡಿಯಷ್ಟು ಮೇಲಿರುತ್ತವೆ. ವಯಸ್ಸಾದವರಿಗೆ ಹಾಗೂ ಮಕ್ಕಳಿಗೆ ಅದನ್ನು ಏರಿ ಕುಳಿತುಕೊಳ್ಳುವುದು ಕಷ್ಟಕರವಾಗಿದೆ.
ಹಿರಿಯರಿಗೆ ಕಾಲು ಎಟುಕದ ಬೆಂಚುಗಳ ಮೇಲೆ ಶಾಲಾ ಮಕ್ಕಳು ಹೇಗೆ ಕುಳಿತುಕೊಳ್ಳಲು ಸಾಧ್ಯ? ಇನ್ನು ಗರ್ಭಿಣಿಯರಿಗೆ ಬೀಳುವ ಭಯ ಕಾಡುತ್ತದೆ. ಈ ಕಾರಣದಿಂದ ಸೀಟುಗಳ ಎತ್ತರವನ್ನು ಕಡಿಮೆ ಮಾಡಿ, ಜನರಿಗೆ ಅನುಕೂಲವಾಗುವಂತೆ ಮಾಡಬೇಕಾಗಿ ವಿನಂತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.