ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಉಪಚುನಾವಣೆಗೆ ನಡೆಯುತ್ತಿರುವ ಪ್ರಚಾರ ನೋಡಿದರೆ ನಮ್ಮ ಇಡೀ ರಾಜಕೀಯ ವ್ಯವಸ್ಥೆ ಹಾದಿ ತಪ್ಪಿರುವುದು ಸ್ಪಷ್ಟವಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಪ್ರಸ್ತಾಪವಾಗಬೇಕಿದ್ದ ಯಾವ ವಿಚಾರವೂ ಇಲ್ಲಿ ಪ್ರಸ್ತಾಪವಾಗದೆ ಕೀಳುಮಟ್ಟದ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ.
ಕೇಂದ್ರದ 2ಜಿ ಹಗರಣ, ಕಾಮನ್‌ವೆಲ್ತ್ ಹಗರಣ, ಕಲ್ಲಿದ್ದಲು ಹಗರಣ, ರಾಬರ್ಟ್ ವಾದ್ರಾ ಅವರ ಬಹುಕೋಟಿ ಭೂಹಗರಣ ಸೇರಿದಂತೆ ಹಲವು ಹಗರಣಗಳು, ಗಡಿಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವ ನಮ್ಮ ಸೈನಿಕರು, ಕುಸಿಯುತ್ತಿರುವ ರೂಪಾಯಿ ಮೌಲ್ಯ, ಅರ್ಥವ್ಯವಸ್ಥೆ ಅವ್ಯವಸ್ಥೆ, ಬೆಲೆ ಏರಿಕೆ, ಅಷ್ಟೇ ಏಕೆ; ಕಾವೇರಿ ನೀರು ಹಂಚಿಕೆ ವಿಷಯ...
ಹೀಗೆ ಯಾವ ವಿಚಾರವೂ ಪ್ರಚಾರದಲ್ಲಿ ಪ್ರಸ್ತಾಪವಾಗುತ್ತಿಲ್ಲ. ಈ ಕ್ಷೇತ್ರಗಳ ಪ್ರಜ್ಞಾವಂತ ಮತದಾರರು ಮತಗಳ ಚಾಟಿ ಮೂಲಕ ಇವರನ್ನು ಚುಚ್ಚಲೇಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.