ADVERTISEMENT

ಇದೋ...ದೇವರು ಮೆಚ್ಚುವ ಕ್ರಮ

ಸುಂದರಮೂರ್ತಿ, ರಾಮನಗರ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST

ಅನಂತಪದ್ಮನಾಭ ದೇವಾಲಯದಲ್ಲಿ 32 ಸಾವಿರ ಕೋಟಿ ರೂ. ಮೌಲ್ಯ ಮೀರಿದ ಚಿನ್ನ ಇದೆ. ತಿರುಪತಿ ಒಂದು ಸಾವಿರ ಟನ್, ಶಿರಡಿ 280 ಕೆ.ಜಿ., ಮುಂಬೈ ಗಣೇಶ, ಸ್ವರ್ಣ ದೇಗುಲ ಚಿನ್ನ ಸೇರಿ ದೇವಾಲಯಗಳಲ್ಲಿ 30 ಸಾವಿರ ಟನ್ ಚಿನ್ನ ಇದೆ. ಜನ, ರಾಜಕಾರಣಿ ಎಲ್ಲರನ್ನೂ `ಚಿನ್ನ ಕೊಡಿ' ಅಂತ ಕೇಳಿದರೆ ದೇಶಕ್ಕಾಗಿ ಕೊಡುತ್ತಾರೆ. ಆರ್.ಬಿ.ಐ. ಖರೀದಿಸಿ, ಕಂತುಗಳಲ್ಲಿ ಹಣ ನೀಡಲಿ. ಇಲ್ಲದಿದ್ದರೆ ಕಳ್ಳರ ಪಾಲಾಗುತ್ತದೆ ಈ ಚಿನ್ನ.

ಕಾಲಜ್ಞಾನದಲ್ಲಿ ಹೇಳಿದೆ ಬಂಗಾರ ಮಾಯವಾಗುತ್ತೆ ಅಂತ! ಸ್ವಿಸ್ ಬ್ಯಾಂಕ್‌ನಲ್ಲಿ ಭಾರತದ ಜನ  ಇಟ್ಟಿರುವ ಕಪ್ಪು ಹಣವನ್ನು ತರಿಸಿ; ಇಟ್ಟವರ ಮುಖಾಂತರವೇ. ಕೆಲವರು ತಂದಿದ್ದಾರೆ ನಮ್ಮ ದೇಶಕ್ಕೆ. ಬೇರೆ ದೇಶಗಳಿಂದ ನಮ್ಮಂತೆ ಪೆಟ್ರೋಲ್, ಡೀಸೆಲ್ ಖರೀದಿ ಮಾಡದೇನೆ ಚೀನಾ ಮುಂದುವರಿದಿದೆ. ಸಂಸಾರ ಒಂದಕ್ಕೆ ಒಂದೇ ಮಗು ಇದೆ. ನಮ್ಮ ದೇಶ ಈ ರೀತಿ ಮಾಡಲಿ.

ದೇವರೂ ಈ ಕ್ರಮ ಸರಿ ಅಂತ ಒಪ್ಪಿಕೊಳ್ತಾನೆ. ದೇವರೇ ಜನ - ಜನವೇ ದೇವರು. ಸರ್ಕಾರ ಕೇಳಿದರೆ ದೇವಸ್ಥಾನದ ಆಡಳಿತ ಮಂಡಳಿ `ಬೇಡ' ಅನ್ನೋಲ್ಲ. ಹಸಿದವರು ಅನ್ನ ತಿನ್ನಲು ಹಾತೊರೆಯುವರು, ಚಿನ್ನವನ್ನಲ್ಲ. ದೇಶದ ಕಷ್ಟಕ್ಕೆ ತಾನೇ ಚಿನ್ನ ಇರುವುದು, ನಂತರ ಜನಗಳ ಕಷ್ಟಕ್ಕೆ. ಮೊದಲು ದೇಶ, ನಂತರ ನಾವು. ನಾವೇ ದೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.