ಸರ್ಕಾರಿ ನೌಕರರು, ಜನಪ್ರತಿನಿಧಿಗಳು, ನ್ಯಾಯಾಂಗ ಸಿಬ್ಬಂದಿಯ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲೇ ಓದಬೇಕೆಂಬ ಅಲಹಾಬಾದ್ ಹೈಕೋರ್ಟ್‌ನ ಐತಿಹಾಸಿಕ ತೀರ್ಪನ್ನು ನೋಡಿ ಬಹಳ ಸಂತೋಷವಾಯಿತು (ಪ್ರ.ವಾ., ಆ.19). ಜೊತೆಯಲ್ಲಿಯೇ, ಇವರೆಲ್ಲರಿಗೆ ಸರ್ಕಾರಿ ಆಸ್ಪತ್ರೆಯ ಸೌಲಭ್ಯಕ್ಕೆ ಮಾತ್ರ ಅರ್ಹತೆಯನ್ನೂ ನಿಗದಿ ಮಾಡಿದ್ದರೆ ಇನ್ನಷ್ಟು ಖುಷಿಯಾಗುತ್ತಿತ್ತು.
ಇವರಲ್ಲದೆ ಸರ್ಕಾರಿ ಧನಸಹಾಯ ಪಡೆಯುವ ಮಂಡಳಿ, ಕಾರ್ಪೊರೇಷನ್, ವಿಶ್ವವಿದ್ಯಾಲಯಗಳು ಕೂಡ ಸರ್ಕಾರಿ ಸಂಸ್ಥೆಗಳನ್ನೇ ಬಳಕೆ ಮಾಡುವಂತಾಗಬೇಕು. ಆಗ ಗುಣಮಟ್ಟದ ಶಾಲೆಗಳು, ಆಸ್ಪತ್ರೆಗಳನ್ನು ಕಾಣಬಹುದು. 90ರ ದಶಕದವರೆಗೂ ಇದೇ ಪರಿಪಾಠವಿತ್ತು. ಅಧಿಕಾರಸ್ಥರ ದುರಾಲೋಚನೆಗಳಿಂದ ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು ಕೇವಲ ಹಳ್ಳಿಗರಿಗೆ ಮತ್ತು ಬಡವರಿಗೆ ಎಂಬಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.