`ವಜ್ರ' ಬಸ್ ಪ್ರಯಾಣ ದರ ದುಬಾರಿ
ಚಿಕ್ಕಲ್ಲಸಂದ್ರದಿಂದ ಇತ್ತೀಚೆಗೆ ಹನುಮಂತನಗರ ಬ್ಯಾಂಕ್ ಕಾಲೊನಿ ಮಾರ್ಗವಾಗಿ, ಗೂಡ್ಸ್‌ಶೆಡ್ ರಸ್ತೆಯ ಮೂಲಕ ಅತಿ ಶೀಘ್ರವಾಗಿ ಕೆಂಪೇಗೌಡ ಬಸ್ ನಿಲ್ದಾಣ ತಲುಪುವ `ವಜ್ರ' ಬಸ್‌ನ ಅನುಕೂಲವನ್ನು ಕಲ್ಪಿಸಿರುವುದು ಶ್ಲಾಘನೀಯ. ಆದರೆ, ಈ ಬಸ್‌ನ ಪ್ರಯಾಣ ದರ ವಿಪರೀತ ದುಬಾರಿ ಎನಿಸಿದೆ.
ಗೌಡನಪಾಳ್ಯದಿಂದ ಹನುಮಂತನಗರಕ್ಕೆ ರೂ 40 ಕೊಟ್ಟು ಪ್ರಯಾಣಿಸುವುದು ವ್ಯರ್ಥವೆನಿಸುತ್ತದೆ (ಇದಕ್ಕೆ ರೂ 10 ಅಂದರೆ ರೂ 50 ತೆತ್ತರೆ ಸುಖವಾಗಿ ಮನೆ ಮುಂದೆ ಆಟೊ ಹತ್ತಿ ಅಲ್ಲಿ ಮನೆ ಮುಂದೆ ಇಳಿಯಬಹುದು!) ಈ ಬಸ್‌ಗಳು ಬಹುತೇಕ (ಸಾಫ್ಟ್‌ವೇರ್ ಪಾರ್ಕ್‌ಗಳ ಮಾರ್ಗಗಳನ್ನು ಹೊರತುಪಡಿಸಿ) ಖಾಲಿಯಾಗಿಯೇ ಸಂಚರಿಸುತ್ತಿದ್ದರೂ ಎಲ್ಲಾ `ವಜ್ರ' ಬಸ್‌ಗ ಪ್ರಯಾಣದರ ಮಾತ್ರ ದುಬಾರಿಯಾಗಿರುವುದು ವಿಪರ್ಯಾಸ. ಎಷ್ಟೋ ವರ್ಷಗಳಿಂದ ಉತ್ತರಹಳ್ಳಿ, ಚಿಕ್ಕಕಲ್ಲಸಂದ್ರದಿಂದ ಹನುಮಂತನಗರ, ಕತ್ರಿಗುಪ್ಪೆ, ಬ್ಯಾಂಕ್ ಕಾಲೊನಿ ಕಡೆಗೆ ಒಂದು ಬಸ್ ಬೇಕು ಎಂಬ ಇಲ್ಲಿನ ನಿವಾಸಿಗಳ ಮನವಿಗೆ ಸ್ಪಂದಿಸಿದ ಬಿಎಂಟಿಸಿ, `ವಜ್ರ' ಬಸ್ ಒದಗಿಸಿದರೂ ಹೆಚ್ಚಿನ ದರ ಕೊಟ್ಟು 4 ಕಿ.ಮೀ.ನಷ್ಟು ದೂರದ ಸ್ಥಳಕ್ಕೂ ರೂ 40 ಕೊಟ್ಟು ಪ್ರಯಾಣಿಸುವುದು ದುಸ್ತರವಾಗಿದೆ.
ಸಂಬಂಧಪಟ್ಟವರು ವಜ್ರ ಬಸ್‌ಗಳ ದರವನ್ನು ಇಳಿಸಿ ಅಥವಾ ಮತ್ತೊಂದೆರಡು ಸಾಮಾನ್ಯ ಬಸ್‌ಗಳನ್ನು ಈ ಮಾರ್ಗದಲ್ಲಿ ಒದಗಿಸಿ ಶ್ರೀಸಾಮಾನ್ಯನಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಮನವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.