ADVERTISEMENT

ಗಣ್ಯರಿಂದ ಅನನುಕೂಲ

ಮಹೇಶ ನಾಯ್ಕ
Published 31 ಜನವರಿ 2016, 19:30 IST
Last Updated 31 ಜನವರಿ 2016, 19:30 IST

ನಾವು ಕಳೆದ ತಿಂಗಳ 18ರಂದು ಕಾರವಾರ–ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿಗೆ ಗೋಕರ್ಣ ರೋಡ್‌ ಸ್ಟೇಷನ್‌ನಿಂದ ಮಧ್ಯಾಹ್ನ 3.35ಕ್ಕೆ ಹತ್ತಿದೆವು. ಇದಕ್ಕೂ ಮೊದಲು, ಸುಮಾರು 3.25ಕ್ಕೆ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಅಲ್ಲಿಂದ ಹಾದುಹೋಯ್ತು. ಅದರ ಎಂಜಿನ್‌ ಈ ನಿಲ್ದಾಣ ಹಾಗೂ ಕುಮಟಾ ನಿಲ್ದಾಣಗಳ ಮಧ್ಯೆ ಕೆಟ್ಟು ನಿಂತಿತಂತೆ.

ಅದರಲ್ಲಿ ಉಡುಪಿ ಪರ್ಯಾಯ ಕಾರ್ಯಕ್ರಮಕ್ಕೆ ಹೊರಟಿದ್ದ ಕೇಂದ್ರ ಸಚಿವರಿದ್ದರಂತೆ.  ಅವರ ಸಲುವಾಗಿ, ಮೇಲಿನವರ ಆಜ್ಞೆಯಂತೆ ನಮ್ಮ ರೈಲನ್ನು ಗೋಕರ್ಣ ರೋಡ್‌ ಸ್ಟೇಷನ್‌ನಲ್ಲೇ ನಿಲ್ಲಿಸಿಬಿಟ್ಟು ಅದರ ಎಂಜಿನ್ನನ್ನು ತೆಗೆದುಕೊಂಡು ಹೋಗಿ ರಾಜಧಾನಿ ಎಕ್‌್ಸಪ್ರೆಸ್‌ ರೈಲಿಗೆ ಕೂಡಿಸಿ ಅದನ್ನು ಓಡಿಸಲಾಯಿತು.

ನಮ್ಮ ಗಾಡಿಯ ಪ್ರಯಾಣಿಕರು ನಿಸ್ಸಹಾಯಕರಾಗಿ ರೈಲಲ್ಲೇ ಕುಳಿತಿರಬೇಕಾಯಿತು. ಸ್ಟೇಷನ್‌ ಅಧಿಕಾರಿಗಳು ‘ಇನ್ನೊಂದು ಎಂಜಿನ್‌ ಬಂದ ಮೇಲೆ ಈ ಗಾಡಿ ಹೊರಡುತ್ತದೆ’ ಅಂದರು. ಎರಡೂವರೆ ತಾಸು ನಂತರ ಇನ್ನೊಂದು ಎಂಜಿನ್‌ ಮಡಗಾಂವದಿಂದ ಬಂತು. ಅದನ್ನು ಜೋಡಿಸಿ, ಗಾಡಿ ಹೊರಟು ಮಂಗಳೂರು ಸ್ಟೇಷನ್ನನ್ನು 3 ತಾಸುಗಳಷ್ಟು ತಡವಾಗಿ ತಲುಪಿ, ಬೆಂಗಳೂರನ್ನು ಮಾರನೇ ದಿನ ಬೆಳಿಗ್ಗೆ 8.30ರ ಬದಲು 10.50ಕ್ಕೆ ತಲುಪಿತು. ಈ ತೊಂದರೆಗೆ ಯಾರು ಹೊಣೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.