ನಮ್ಮ ದೇಶದಲ್ಲಿ ಖೋಟಾ ನೋಟುಗಳ ಚಲಾವಣೆ ಪ್ರಕರಣಗಳು ದಶಕಗಳಿಂದಲೂ ಬೆಳಕಿಗೆ ಬರುತ್ತಲೇ ಇವೆ. ಅಂತೆಯೇ ಹಣ ದ್ವಿಗುಣಗೊಳಿಸುವ ಮತ್ತು ಚಿನ್ನವನ್ನು ದುಪ್ಪಟ್ಟಾಗಿಸುವ ಮೋಸದ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ಆದರೂ ಜನ ಎಚ್ಚೆತ್ತುಕೊಳ್ಳದಿರುವುದು ದುರದೃಷ್ಟಕರ.
ಹಣ ಗಳಿಕೆಯ ಅತಿಮೋಹ ಹಾಗೂ ದಿಢೀರನೆ ಶ್ರೀಮಂತರಾಗುವ ಬಯಕೆಯಿಂದ ಹಿಂದೆ ಮುಂದೆ ಯೋಚಿಸದೆ ‘ರಾತ್ರಿ ಕಂಡ ಬಾವಿಗೆ ಹಗಲು ಹೋಗಿ ಬಿದ್ದಂತೆ’ ಮೋಸಗಾರರ ಬಲೆಗೆ ಸುಶಿಕ್ಷಿತರು ಕೂಡಾ ಬಿದ್ದು ಹಣ ಕಳೆದುಕೊಂಡು ಇಂಗು ತಿಂದ ಮಂಗನಂತಾದ ಪ್ರಸಂಗಗಳು ವರದಿಯಾಗುತ್ತಿವೆ. ಈ ಮರುಳು ಮನುಜರನ್ನು ಕಂಡು ನಗೆಯು ಬರುತಿದೆ ಎನಗೆ ನಗೆಯು ಬರುತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.