ಕಾರ್ಪೊರೇಶನ್- ಕಗ್ಗಲೀಪುರ ನಡುವಿನ ಜಿ 5 ಬಸ್, ಈ ಮಾರ್ಗದಲ್ಲಿ ಸಂಚರಿಸುವವರಿಗೆ ಬಹಳ ಅನುಕೂಲಕರವಾಗಿದೆ. ಆದರೆ ಮತ್ತಷ್ಟು ಬಸ್‌ಗಳನ್ನು ಹಾಕಿ ಇದನ್ನು ಮಹಾತ್ಮ ಗಾಂಧಿ ರಸ್ತೆಯ ಮೆಟ್ರೊ ನಿಲ್ದಾಣದ ವರೆಗೆ ವಿಸ್ತರಿಸಿದರೆ ಇನ್ನಷ್ಟು ಪ್ರಯೋಜನವಾಗುತ್ತದೆ.
ಏಕೆಂದರೆ ಈ ಮಾರ್ಗದಲ್ಲಿ ಪ್ರಯಾಣಿಸುವವರು ಈಗ ಎರಡು ಮೂರು ಬಸ್‌ಗಳನ್ನು ಬದಲಾಯಿಸಬೇಕಾಗುತ್ತದೆ. ಕನಕಪುರ ರಸ್ತೆಯ ಕಗ್ಗಲೀಪುರದವರೆಗೆ ಯಾವುದೇ ಬಸ್ ಸಂಚರಿಸುವುದಿಲ್ಲ.
ಬಹಳಷ್ಟು ಜನರು ಮಹಾತ್ಮ ಗಾಂಧಿ ರಸ್ತೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಕೆಲಸಕ್ಕೆ ಬರುವುದರಿಂದ ನೇರ ಬಸ್‌ನಿಂದ ಅನುಕೂಲವಾಗುತ್ತದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಜಿ 5 ಬಸ್ಸನ್ನು ಮೆಟ್ರೊವರೆಗೆ ವಿಸ್ತರಿಸಲು ವಿನಂತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.