ನಮ್ಮವರೇ ಡಬ್ಬಿಂಗ್ ಸಿನಿಮಾ ಮಾಡದಿದ್ದರೂ, ಹೊರಗಿನವರು ತಮ್ಮ ತಮ್ಮ ಸಿನಿಮಾಗಳನ್ನ ತಂದು ಕನ್ನಡಕ್ಕೆ ಡಬ್ಬಿಂಗ್ ಮಾಡುತ್ತಾ ಕೂತರೂ ಸಾಕು, ಕನ್ನಡ ಚಿತ್ರೋದ್ಯಮದ ತಾಂತ್ರಿಕ ಪರಿಕರ ವ್ಯವಸ್ಥೆಗೆ ಭಾರೀ ಹೊಡೆತ ಬೀಳುವುದು ಖಚಿತ. ನಮ್ಮಲ್ಲಿನ ತಂತ್ರಜ್ಞಾನದ ಕೊರತೆಯನ್ನೇ ಬಳಸಿಕೊಂಡು, ಬೇರೆ ಭಾಷೆಯವರು ಡಬ್ಬಿಂಗ್ ಸಿನಿಮಾ ಹಿಡಿದುಕೊಂಡು ಬಂದರೆ, ದೂರಗಾಮಿ ಪರಿಣಾಮ ಚಿತ್ರರಂಗದ ಮೇಲಾಗುವುದು ನಿಶ್ಚಿತ.
ಕನ್ನಡ ಭಾಷೆ, ಸಂಸ್ಕೃತಿ, ತಂತ್ರಜ್ಞಾನ ಬೆಳವಣಿಗೆಯ ಹಿನ್ನೆಲೆಯಲ್ಲಿ ಡಬ್ಬಿಂಗ್ ದೂರವಿಡುವುದರಲ್ಲೇ ಅರ್ಥ ಹೆಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.