ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆ ಬಳಿ ದಾರಿಹೋಕರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ ದೃಶ್ಯಗಳನ್ನು ಸಿ.ಸಿ. ಟಿವಿ ಕ್ಯಾಮೆರಾ ಸೆರೆ ಹಿಡಿದಿದೆ (ಪ್ರ.ವಾ., ಆಗಸ್ಟ್ 17).
ಬೀದಿ ನಾಯಿಗಳ ಹಾವಳಿ ಕೇವಲ ಎಂ.ಎಸ್. ರಾಮಯ್ಯ ಆಸ್ಪತ್ರೆ ಪ್ರದೇಶಕ್ಕೆ ಮಾತ್ರ ಸೀಮಿತವಲ್ಲ. ನಗರದ ಆಯಕಟ್ಟಿನ ಜಾಗಗಳಲ್ಲಿ ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಅಳವಡಿಸಿದರೆ ಇಂಥದೇ ದೃಶ್ಯಗಳನ್ನು ಎಲ್ಲಾ ಕಡೆ ಕಾಣಬಹುದು. ನಗರವಾಸಿಗಳು ಇವುಗಳ ಹಾವಳಿಯನ್ನು ತಮ್ಮ ಕರ್ಮವೋ ಎಂಬಂತೆ ಸಹಿಸುತ್ತಿದ್ದಾರೆ.
ಈ ಕುರಿತು ನಗರಪಾಲಿಕೆ ಅಧಿಕಾರಿಗಳಿಗೆ, ಚುನಾಯಿತ ಸದಸ್ಯರಿಗೆ ಹೇಳಿದರೆ ಕೆಲವರು ‘ಆಯಿತು ನಿವಾರಿಸೋಣ’ ಎಂದರೆ, ಮತ್ತೆ ಕೆಲವರು ಪ್ರಾಣಿ ದಯಾ ಸಂಘದವರತ್ತ ಬೊಟ್ಟು ಮಾಡಿ ಜಾರಿಕೊಳ್ಳುತ್ತಾರೆ. ಜನರ ಪರದಾಟವಂತೂ ಹೆಚ್ಚುತ್ತಲೇ ಇದೆ. ನಗರಪಾಲಿಕೆಯವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೋ ಅಥವಾ ಪ್ರಾಣಿ ದಯಾ ಸಂಘದವರೇ ಅಡ್ಡಿಪಡಿಸುತ್ತಾರೋ ತಿಳಿಯದಾಗಿದೆ.
ಸಂಬಂಧಪಟ್ಟವರು ಬೀದಿನಾಯಿಗಳ ಹಾವಳಿಯನ್ನು ತಪ್ಪಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಗರದ ಪ್ರವೇಶ ದ್ವಾರಗಳಲ್ಲಿ ‘ನಾಯಿಗಳಿವೆ ಎಚ್ಚರಿಕೆ’ ಎಂಬ ಫಲಕ ಹಾಕಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.