ಬೆಂಗಳೂರು ಮಹಾನಗರ ಪಾಲಿಕೆಯು ಪ್ರತಿವರ್ಷ ಜೂನ್‌ನಲ್ಲಿ ಅಂದರೆ ಮಳೆಗಾಲ ಆರಂಭವಾದ ಸಮಯದಲ್ಲಿ ಪಾಲಿಕೆ ವ್ಯಾಪ್ತಿಯ ಪ್ರತಿಯೊಂದು ವಾರ್ಡ್‌ಗಳಲ್ಲಿ ಸಸಿಗಳನ್ನು ನೆಡುವುದಾಗಿ ಹೇಳಿತು. ಈಗ ಕೆಲವೇ ವಾರ್ಡ್‌ಗಳಲ್ಲಿ ಸಸಿಗಳನ್ನು ನೆಟ್ಟು ಕೈತೊಳೆದುಕೊಳ್ಳುತ್ತಿದೆ. ಸಸಿಗಳನ್ನು ಎಲ್ಲಿ ನೆಡಲಾಗಿತ್ತು ಎಂಬ ಮಾಹಿತಿಯಂತೂ ಸಿಗುವುದೇ ಇಲ್ಲ.
ಬೆಂಗಳೂರು ನಗರಿಯನ್ನು ಉದ್ಯಾನ ನಗರಿಯನ್ನಾಗಿ ಉಳಿಸಿಕೊಳ್ಳಲು ಪ್ರತಿಯೊಂದು ಮನೆಯ ಮುಂದೆ ಮಾಲೀಕರು ಕೋರುವ ಹಣ್ಣು, ಹೂ, ಔಷಧಿ, ಸುಗಂಧ ದ್ರವ್ಯ ಹಾಗೂ ಇತರೆ ಗಿಡಗಳನ್ನು ನೆಟ್ಟು ಮಾಲೀಕರೇ ಪೋಷಿಸುವಂತೆ ಜಾಗೃತಿ ಮೂಡಿಸಿ, ಹಾಗೆಯೇ ಬಡಾವಣೆಗೊಂದು ಮರಗಿಡಗಳಿರುವ ಉದ್ಯಾನವನವನ್ನು ನಿರ್ಮಿಸಬೇಕು. ನಗರವನ್ನು ವಾಯುಮಾಲಿನ್ಯದಿಂದ ಮುಕ್ತಗೊಳಿಸಿ ಆಮ್ಲಜನಕ ನಗರಿಯನ್ನಾಗಿ ಪರಿವರ್ತಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.