ADVERTISEMENT

ಪುನರ್‌ ಪರಿಶೀಲಿಸಿ

ಪಂಪಾಪತಿ ಹಿರೇಮಠ ಧಾರವಾಡ
Published 19 ಜುಲೈ 2016, 19:30 IST
Last Updated 19 ಜುಲೈ 2016, 19:30 IST

ರಾಜ್ಯ ಸರ್ಕಾರ ಲಿಕ್ಕರ್‌ ಲಾಬಿಗೆ ಮಣಿದು ಬೆಂಗಳೂರಿನ ಬಾರ್‌ಗಳನ್ನು ರಾತ್ರಿ 1 ಗಂಟೆಯವರೆಗೂ ತೆರೆಯಲು ಅನುಮತಿ ನೀಡಿದೆ. ಇದರಿಂದ ಬಾರ್‌ಗಳು, ಮಾಲ್ ಮತ್ತು ಸೂಪರ್ ಮಾರ್ಕೆಟ್‌ಗಳ ವಹಿವಾಟು ಹೆಚ್ಚಾಗಲಿದೆ ಮತ್ತು ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತದೆ. ಆದರೆ ಸರ್ಕಾರ ಈ ನಿರ್ಧಾರಕ್ಕೆ ಬರುವ ಮುನ್ನ ಇದರಿಂದಾಗುವ ಪರಿಣಾಮಗಳ ಬಗ್ಗೆ ಯೋಚಿಸಬೇಕಿತ್ತು.

ರಾತ್ರಿ 11 ಗಂಟೆಯವರೆಗೆ ಬಾರ್‌ಗಳು ತೆರೆದಿದ್ದಾಗಲೇ ಸಾಕಷ್ಟು ಅಪಘಾತಗಳು ಮತ್ತು ಗಲಾಟೆಗಳು ನಡೆಯುತ್ತಿದ್ದವು. ಈಗ ಅಪರಾಧಗಳ ಸಂಖ್ಯೆ ಇನ್ನೂ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಒಂದು ವರದಿಯ ಪ್ರಕಾರ, ಅತ್ಯಾಚಾರ ಮತ್ತು ಅಪಘಾತಗಳು ಹೆಚ್ಚಾಗಲು ಕುಡಿತವೇ ಕಾರಣ. ಪಾನಮತ್ತ ವ್ಯಕ್ತಿ ಮನಸ್ಸಿನ ಮೇಲೆ ಹತೋಟಿ ಕಳೆದುಕೊಳ್ಳುತ್ತಾನೆ.  ಅಮಲಿನಲ್ಲಿ ಅಪಘಾತಗಳಿಗೆ ಕಾರಣನಾಗುತ್ತಾನೆ.

ಈಗಾಗಲೇ ಬೀದಿಗೊಂದು ಇರುವ ಮದ್ಯದ ಅಂಗಡಿಗಳಲ್ಲದೆ ರಾಜ್ಯದಲ್ಲಿ ಇನ್ನೂ ಹೆಚ್ಚಿನ ಮದ್ಯದ ಅಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಲಿದೆ. ಆದಾಯ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅಬಕಾರಿ ಸಚಿವರು ಹೇಳಿದ್ದಾರೆ. ಇದರಿಂದ ಪಟ್ಟಣಗಳು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಜನ ಕುಡಿತಕ್ಕೆ ದಾಸರಾಗುತ್ತಾರೆ.

ಅಬಕಾರಿ ಇಲಾಖೆ ಎಲ್ಲ ಮದ್ಯದ ಅಂಗಡಿಗಳಿಗೂ ಇಂತಿಷ್ಟು ಮಾರಾಟದ ಗುರಿ ಸಾಧಿಸಲೇಬೇಕೆಂದು ನೋಟಿಸ್‌ ಸಹ ಜಾರಿ ಮಾಡಿದೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿರಲಾರದು. ಆದಾಯ ಹೆಚ್ಚಿಸಿಕೊಳ್ಳಲು ಮದ್ಯ ಮಾರಾಟ ಮಾತ್ರ ಮಾರ್ಗವಲ್ಲ. ಸಾಕಷ್ಟು ಪರ್ಯಾಯ ಮಾರ್ಗಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.