ಉತ್ತಮ ಆಡಳಿತವೆಂದರೆ ಕಾನೂನಿನ ಪಾಲನೆ ಮಾತ್ರ ಅಲ್ಲ. ನಿಜ ಅರ್ಥದಲ್ಲಿ ಕಾನೂನನ್ನು ಜನರ ಬದುಕಿಗೆ ಪೂರಕವಾಗಿ ಬಳಸುವುದು, ಬದಲಾಯಿಸುವುದು. ಪ್ರಜಾಪ್ರಭುತ್ವದ ದೇಶದಲ್ಲಿ ಅದರಲ್ಲಿಯೂ ಸಂಸದೀಯ ಮಾದರಿಯ ಸರ್ಕಾರದಲ್ಲಿ ಅಧಿಕೃತ ವಿರೋಧ ಪಕ್ಷದ ಇರುವಿಕೆ ಅತ್ಯಂತ ಅಗತ್ಯ ಮತ್ತು ಅದು ಪ್ರಜಾಪ್ರಭುತ್ವದ ಸೌಂದರ್ಯವೂ ಹೌದು.
ಕಾನೂನಿನ ಕಾರಣ ನೀಡಿ ವಿರೋಧ ಪಕ್ಷದ ಇರುವಿಕೆಯನ್ನು ತಡೆಯುವುದು ಸರಿಯಾದ ಕ್ರಮವಲ್ಲ. ಅದೂ ಅಲ್ಲದೆ ಈ ಹಿಂದೆ ಅವರು (ಕಾಂಗ್ರೆಸ್) ಹೀಗೆ ಮಾಡಿದ್ದಾರೆ ಎಂಬುದು ನೀವು (ಬಿಜೆಪಿ) ಈಗ ಮಾಡುವುದಕ್ಕೆ ಸಮರ್ಥನೆಯಾಗಲಾರದು.
ಪ್ರಜಾತಂತ್ರ ವ್ಯವಸ್ಥೆಯ ಒಳಿತಿಗಾಗಿ ಕಾನೂನಿಗೆ ಅಗತ್ಯ ಬದಲಾವಣೆ ತಂದು ಆಡಳಿತ ಪಕ್ಷ, ಅಧಿಕೃತ ವಿರೋಧ ಪಕ್ಷಕ್ಕೆ ಅವಕಾಶ ನೀಡಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.