ಕಳೆದ ರಾಜ್ಯೋತ್ಸವ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯ, ಕರ್ನಾಟಕ ಸರ್ಕಾರದ ಬೇಡಿಕೆಯಂತೆ ರಾಜ್ಯದ 12 ನಗರಗಳ ಮರುನಾಮಕರಣಕ್ಕೆ ಒಪ್ಪಿಗೆ ನೀಡಿತ್ತು. ಅದರ ಅನ್ವಯ ರಾಜ್ಯ ಸರ್ಕಾರ ಅಧಿಸೂಚನೆ ಕೂಡ ಹೊರಡಿಸಿದೆ. ಈ ಆದೇಶ ಹೊರಡಿ ವರುಷವಾದರೂ ಇನ್ನೂ ಪೂರ್ತಿ ಜಾರಿಗೆ ಬಂದಂತಿಲ್ಲ. ಸರ್ಕಾರದ ಹಲವಾರು ಕಚೇರಿ ನಾಮಫಲಕಗಳಲ್ಲಿ ಹಾಗೂ ವ್ಯವಹಾರಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಹಳೆಯ ಹೆಸರೇ ಬಳಕೆಯಲ್ಲಿದೆ.
ಖಾಸಗಿ ಸಂಸ್ಥೆಗಳು ‘ಬೆಂಗಳೂರು’ ಎನ್ನುವ ಹೆಸರಿನ ಬದಲು ‘ಬ್ಯಾಂಗಲೋರ್’ ಹೆಸರನ್ನೇ ಬಳಸುತ್ತಿವೆ. ಇದೇ ರೀತಿ ಶಿಮೊಗ, ಮ್ಯಾಂಗಲೋರ್ ಮುಂತಾದ ಹೆಸರುಗಳು ಕೂಡ ಹಳೆಯ ರೀತಿಯಲ್ಲೇ ಬಳಕೆಯಾಗುತ್ತಿವೆ. ಈ ಹಿಂದೆ ಚೆನ್ನೈ, ಕೋಲ್ಕತ್ತ, ಮುಂಬೈ ನಗರಗಳ ಹೆಸರು ಬದಲಾದಾಗ ಹೊಸ ಹೆಸರು ಬೇಗ ಬಳಕೆಗೆ ಬಂದದ್ದನ್ನು ಕಂಡಿದ್ದೇವೆ. ಆದರೆ ಕರ್ನಾಟಕದಲ್ಲಿ ಮಾತ್ರ ಹೀಗಾಗುತ್ತಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.