ADVERTISEMENT

ಬಿ.ಟಿ. ಹತ್ತಿ ನಿಷೇಧಿಸಲಿ

ವಿ.ಗಾಯತ್ರಿ
Published 15 ಫೆಬ್ರುವರಿ 2016, 19:55 IST
Last Updated 15 ಫೆಬ್ರುವರಿ 2016, 19:55 IST

ಬೆಂಗಳೂರು ಇಂಡಿಯಾ ಬಯೊ ಮೇಳದಲ್ಲಿ ಮಾತನಾಡುತ್ತಾ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು, ಕುಲಾಂತರಿ ತಂತ್ರಜ್ಞಾನ ಮತ್ತು ಅದನ್ನು ರೈತರ ಮೇಲೆ ಪ್ರಹಾರ ಮಾಡುತ್ತಿರುವ ಲಾಭಕೋರ ದೈತ್ಯ ಕಂಪೆನಿಗಳು, ಅವುಗಳ ಏಜೆಂಟರಂತೆ ವರ್ತಿಸುವ ವಿಜ್ಞಾನಿಗಳನ್ನು  ಟೀಕಿಸಿದ್ದಾರೆ.  2013-14ರಲ್ಲಿ ಬಿ.ಟಿ. ಹತ್ತಿಯಲ್ಲಿ ಆದ ನಷ್ಟಕ್ಕೆ ಸರ್ಕಾರ ಮೊನ್ಸಾಂಟೊ-ಮಹಿಕೊ ಕಂಪೆನಿಯ ಮೇಲೆ ಹಾಕಿದ ಮೊಕದ್ದಮೆ ಇನ್ನೂ ನಡೆಯುತ್ತಿರುವಾಗಲೇ ಮೊನ್ಸಾಂಟೊ ಕಂಪೆನಿಯ ಲೈಸೆನ್ಸ್ ಪಡೆದ ಸಂಸ್ಥೆಗಳು ಕಳಪೆ ಬೀಜಗಳ ಮಾರಾಟದ ಬಗ್ಗೆ ಆಕ್ಷೇಪಿಸಿದ್ದಾರೆ. ಇದು ಸ್ವಾಗತಾರ್ಹ. ಹಾಗೆಯೇ ಕುಲಾಂತರಿಯಲ್ಲದ ತಂತ್ರಜ್ಞಾನಕ್ಕೆ ಅವಕಾಶವಿದೆ  ಎಂದಿದ್ದಾರೆ ಅವರು.

ಸರ್ಕಾರ ಈ ಕೂಡಲೇ ರಾಜ್ಯದಲ್ಲಿ ವಿನಾಶಕಾರಿ ಬಿ.ಟಿ. ಹತ್ತಿಯನ್ನು ನಿಷೇಧ ಮಾಡಲಿ. ಈ ಹಿಂದೆ ಇದ್ದ ‘ಡಿಸಿಎಚ್ 32’ನಂಥ ಹೈಬ್ರಿಡ್ ತಳಿಗಳನ್ನು, ಒಣ ಬೇಸಾಯಕ್ಕೂ ಹೊಂದಿಕೊಳ್ಳುತ್ತಿದ್ದ ‘ಎನ್‌ಎಚ್ 44’, ‘ಜಯಧರ್’ ಮುಂತಾದ ಸುಧಾರಿತ ತಳಿಗಳನ್ನು ಮತ್ತೆ ಚಾಲ್ತಿಗೆ ತರಲಿ. ಲಾಭಕೋರ ಕಂಪೆನಿಗಳನ್ನು ದೂರವಿರಿಸಿ, ಬೀಜ ಉತ್ಪಾದನೆ, ಗುಣಮಟ್ಟ ನಿಯಂತ್ರಣ ಮತ್ತು ಬೀಜ ಹಂಚಿಕೆಯ ಜವಾಬ್ದಾರಿಯನ್ನು ಸರ್ಕಾರವೇ  ತೆಗೆದುಕೊಳ್ಳಲಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.