ADVERTISEMENT

ಬಿ.ವಿ.ಕಾರಂತರನ್ನು ಮರೆತೆವೇ?

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2014, 19:30 IST
Last Updated 31 ಡಿಸೆಂಬರ್ 2014, 19:30 IST

ರಂಗಭೂಮಿಗೆ ಹೊಸತಿರುವು ನೀಡಿದ ಪ್ರಸಿದ್ಧ ರಂಗತಜ್ಞ ಬಿ. ವಿ. ಕಾರಂತರ ಹೆಸರಿನಲ್ಲಿ ಒಂದು ವಸ್ತುಸಂಗ್ರಹಾಲಯ ಮಾಡುವುದಾಗಿ ರಾಜ್ಯಸರ್ಕಾರ ತೀರ್ಮಾನಿಸಿತ್ತಾದರೂ ಅದು ಇಲ್ಲಿಯವರೆಗೆ ಕಾರ್ಯರೂಪಕ್ಕೆ ಇಳಿದಿಲ್ಲ.

ಮೈಸೂರಿನಲ್ಲಿ 1989ರಲ್ಲಿ ಪ್ರಾರಂಭವಾದ ‘ರಂಗಾಯಣ’ ಬಿ. ವಿ. ಕಾರಂತರ ಕನಸಿನ ಕೂಸು. ಅದರ ಮೊದಲ ನಿರ್ದೇಶಕರೂ ಆಗಿದ್ದ ಅವರು ಅನೇಕ ನವನವೀನ ರಂಗಪ್ರಯೋಗ­ಗಳನ್ನು ಮಾಡಿದ್ದರು. ಜತೆಗೆ ದೇಶ,ವಿದೇಶಗಳ ಮಟ್ಟದಲ್ಲಿ ಗಮನ ಸೆಳೆಯುವಂಥ ಹಲವಾರು ಕೆಲಸಗಳನ್ನು ಕೈಗೊಂಡಿದ್ದರು.

ಪ್ರಸಿದ್ಧ ಇಂಗ್ಲಿಷ್‌ ಸಾಹಿತಿ, ಮೈಸೂರುವಾಸಿ ಆರ್‌. ಕೆ. ನಾರಾಯಣ್‌ ಅವರ ಮೈಸೂರಿನ ಮನೆಯನ್ನು ಒಂದು ವಸ್ತುಸಂಗ್ರಹಾಲಯ ಮಾಡುವುದಾಗಿ ಹಿಂದಿನ ಸರ್ಕಾರ ಹೇಳಿತ್ತು. ಈ ಕುರಿತೂ ಇದುವರೆಗೆ ಏನೂ ಆಗಿಲ್ಲ. ‘ರಂಗಾಯಣ’ ಇರುವ ‘ಕಲಾಮಂದಿರ’ ಜಾಗ­ದಲ್ಲಿ ಬಿ. ವಿ. ಕಾರಂತರ ವಸ್ತುಸಂಗ್ರಹಾ­ಲಯ ನಿರ್ಮಿಸಲು ಸಾಕಷ್ಟು ಜಾಗವಿದ್ದರೂ  ಏನೂ ಪ್ರಗತಿ ಕಂಡುಬಂದಿಲ್ಲ. 

ಕಾರಂತರು ನಿರ್ದೇಶಕರಾಗಿದ್ದು ಅನೇಕ ಪ್ರಯೋಗಗಳನ್ನು ಮಾಡಿ ಕಾಲು ಶತಮಾನವೇ ಆಯಿತು. ಕಾರಂತರ ವಸ್ತು­ಸಂಗ್ರಹಾಲಯವನ್ನು ಕುರಿತ ವಿಷಯದಲ್ಲಿ ರಂಗಭೂಮಿಯ ಸಮಾಜವೂ ಮೌನವಹಿಸಿದೆ! ಕಾರಂತರೊಡನೆ ಕೆಲಸ ಮಾಡಿರುವ ನನ್ನಂಥ ರಂಗಕಲಾವಿದರ ಆಶಯ ಕೇವಲ ಆಸೆಯಾಗಿ ಹಾಗೇ ಉಳಿಯುವುದೇ?
– ಎಚ್‌. ಜಿ. ಸೋಮಶೇಖರರಾವ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.