ಮದುವೆ ಎಂಬುದು ಇತ್ತೀಚೆಗೆ ಮಧ್ಯಮ ವರ್ಗಕ್ಕೂ ದೊಡ್ಡ ಹೊರೆಯಾಗಿದೆ. ಕನಿಷ್ಠ ಹತ್ತು ಲಕ್ಷ ರೂಪಾಯಿ ಖರ್ಚು ಮಾಡಲೇಬೇಕಾದ ಸ್ಥಿತಿ ಇದೆ. ಕಡಿಮೆ ವೆಚ್ಚದಲ್ಲಿ ಮದುವೆ ಎಂದರೆ ಗಂಡಿನ ಕಡೆಯವರು ಒಲ್ಲೆ ಎನ್ನುತ್ತಾರೆ. ವರದಕ್ಷಿಣೆ ನಿಷೇಧ ಕಾನೂನು ಇದ್ದರೂ ಅದರ ಭಯವೇ ಜನರಿಗೆ ಇಲ್ಲ.
ದುಬಾರಿ ಮದುವೆಗೆ ಯಾವುದೋ ಒಂದು ರೂಪದಲ್ಲಿ ಕಡಿವಾಣ ಹಾಕಲು ಸರ್ಕಾರ ಮುಂದಾಗಿತ್ತು. ಇದರಿಂದ ತುಸು ಮಿತವ್ಯಯ ಸಾಧ್ಯವಾಗುತ್ತಿತ್ತೊ ಏನೋ!? ಆದರೆ, ಉಳ್ಳವರು ತಿರುಗಿಬೀಳುತ್ತಾರೆ ಎಂಬ ಭಯದಿಂದ ಸರ್ಕಾರ ಹಿಂದಕ್ಕೆ ಸರಿದಿದೆ. ಸಮಾಜಕ್ಕೆ ಒಳಿತಾಗುವುದಿದ್ದರೆ ಅಂತಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಹಿಂಜರಿಯಬಾರದು. ಮದುವೆ ಖರ್ಚು ನಿಯಂತ್ರಿಸುವ ಬದ್ಧತೆ ಸರ್ಕಾರಕ್ಕೆ ಇದ್ದರೆ ಕೆಲವರ ವಿರೋಧ ಲೆಕ್ಕಿಸದೆ ಕಾನೂನು ಜಾರಿಗೆ ತರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.