ಮಹಾನಗರ ಪಾಲಿಕೆ ಕಚೇರಿಯಿಂದ ಕೆ. ಆರ್. ಸರ್ಕಲ್ಗೆ ಹೋಗುವ ನೃಪತುಂಗ ರಸ್ತೆಯಲ್ಲಿ ಎಡಗಡೆ ಮಿಥಿಕ್ ಸೊಸೈಟಿ (ಡಾಲಿ ಮೆಮೊರಿಯಲ್ ಹಾಲ್) ಬಳಿ ಒಂದು ಹೊಂಗೆ ಮರ ಇದೆ. ಆ ಮರದ ಬುಡವೆಲ್ಲ ಬಹು ಶಿಥಿಲಗೊಂಡು ಜೋರಾಗಿ ನೂಕಿದರೆ ಬೀಳುವ ಸ್ಥಿತಿಯಲ್ಲಿದೆ.
ದಟ್ಟವಾದ ವಾಹನ ಸಂಚಾರದಿಂದ ಕೂಡಿರುವ ರಸ್ತೆಯ ಕಡೆ ಬಾಗಿರುವ ಈ ಮರವನ್ನು ಏನಾದರೂ ಅನಾಹುತ ಆಗುವುದಕ್ಕೆ ಮುಂಚೆ ಕಡಿದು ಹಾಕಬೇಕಾಗಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ವಿನಂತಿಸಿಕೊಳ್ಳುತ್ತೇನೆ.
-
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.