ಪಾಕಿಸ್ತಾನದ ಪೆಶಾವರದಲ್ಲಿ ಉಗ್ರವಾದಿಗಳು ಶಾಲಾಮಕ್ಕಳಿಗೆ ಗುಂಡಿಕ್ಕಿ ಕೊಂದಿದ್ದಾರೆ. ಇತಿಹಾಸ ಕಂಡು ಕೇಳಿ ಅರಿಯದ ಇಂತಹ ಘಟನೆಯಿಂದ ಜಗತ್ತು ದಿಗ್ಭ್ರಮೆಗೊಂಡಿದೆ. ಪಾಕಿಸ್ತಾನ ತನ್ನ ತಪ್ಪಿಗೆ ತಕ್ಕ ಬೆಲೆ ತೆತ್ತಿದೆ. ಆದರೆ, ಇದು ಮುಗ್ಧ ಮಕ್ಕಳ ರೂಪದಲ್ಲಿ ಎಂಬುದು ಮಾತ್ರ ದುರಂತ!
ಈ ಕುರಿತು ಸಮೂಹ ಮಾಧ್ಯಮಗಳಲ್ಲಿ, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಹೆಚ್ಚಿನವರು ಇದು ಪಾಕಿಸ್ತಾನಕ್ಕೊಂದು ಪಾಠ ಎಂದು ಹೇಳುತ್ತಿದ್ದಾರೆ. ಇದು ಪಾಕಿಸ್ತಾನಕ್ಕೆ ಮಾತ್ರ ಪಾಠವೆ? ಉಗ್ರವಾದವನ್ನು ಬೆಂಬಲಿಸುವ, ಸಹಿಸಿಕೊಳ್ಳುವ ಎಲ್ಲರಿಗೂ ಪಾಠವಲ್ಲವೆ? ಮುಖ್ಯವಾಗಿ ಇಸ್ಲಾಂ, ಕ್ರೈಸ್ತ, ಹಿಂದೂ ಮೊದಲಾದ ಜಗತ್ತಿನ ಎಲ್ಲ ಧರ್ಮಗಳ ಮೂಲಭೂತವಾದಿಗಳಿಗೆ, ಮೂಲಭೂತವಾದವನ್ನು ಬೆಂಬಲಿಸುತ್ತಿರುವವರಿಗೆ ಇದೊಂದು ಮಹಾಪಾಠ! ಇದನ್ನು ಅರ್ಥ ಮಾಡಿಕೊಳ್ಳಬೇಕಾದ ಹಾಗೂ ಅರ್ಥ ಮಾಡಿಸಬೇಕಾದ ತುರ್ತು ನಾಗರಿಕ ಜಗತ್ತಿಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.