ಕವಿ ಸಿದ್ಧಲಿಂಗಯ್ಯನವರು ಬರೆದ ‘ಯಾರಿಗೆ ಬಂತು ಸ್ವಾತಂತ್ರ್ಯ’ ಕವನ ಈಗ ಹಳೆಯದಾಗಿದೆ.
ಆ ಕವನದ ಕಠೋರ ಸತ್ಯವನ್ನು ತೋರಿಸುವ ಘಟನೆ ಇತ್ತೀಚೆಗೆ ನವಲಗುಂದ ತಾಲ್ಲೂಕಿನ ಯಮನೂರು ಗ್ರಾಮದಲ್ಲಿ ಸಂಭವಿಸಿದೆ. ಮಹಾದಾಯಿ ನೀರಿಗಾಗಿ ನಡೆದ ಪ್ರತಿಭಟನೆ ನವಲಗುಂದದಲ್ಲಿ ಹಿಂಸಾತ್ಮಕ ರೂಪ ತಳೆದದ್ದು ದುರಂತವೇ ಸರಿ.
ಆದರೆ ಅಲ್ಲಿ ಅಮಾಯಕ ಮಹಿಳೆಯರು, ಮಕ್ಕಳು, ಮುದುಕರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು ಜಿಲ್ಲಾ ಆಡಳಿತಕ್ಕೆ ಒಂದು ಕಪ್ಪು ಚಿಕ್ಕೆ. ಯಮನೂರು ಯಮಸದೃಶವೇ ಆಯಿತು. ಪೊಲೀಸರಿಗೆ ಮಾನವೀಯತೆ ಕುರಿತು ರಾಜ್ಯ ಮಟ್ಟದಲ್ಲಿ ತರಬೇತಿ ಶಿಬಿರ ಏರ್ಪಡಿಸುವ ಅಗತ್ಯವಿದೆ.
ಲಾಠಿ ಚಾರ್ಜ್ ಮಾಡುವಾಗ ವಿವೇಚನೆ ಮುಖ್ಯ. ಅದನ್ನು ಕಳೆದುಕೊಂಡು ಮಹಿಳೆಯರ ಮೇಲೆ ಲಾಠಿ ಬೀಸಿರುವುದು ಅಕ್ಷಮ್ಯ. ಪೊಲೀಸ್ ಇಲಾಖೆಯನ್ನು ಸಂವೇದನಾಶೀಲಗೊಳಿಸುವ ಪ್ರಯತ್ನಗಳು ಇನ್ನಾದರೂ ಬಿರುಸು ಪಡೆಯಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.