ADVERTISEMENT

ಮುಕ್ತಿಯೆಂದು?

ಸಂಪತ್ ಆಕಳವಾಡಿ, ಬಳ್ಳಾರಿ
Published 15 ಸೆಪ್ಟೆಂಬರ್ 2015, 19:54 IST
Last Updated 15 ಸೆಪ್ಟೆಂಬರ್ 2015, 19:54 IST

ರೈಲು ತುಂಬಾ ಅಗ್ಗದ, ಆರಾಮದಾಯಕ ಪ್ರಯಾಣ. ಇಂಥ ರೈಲು ಬೋಗಿಗಳನ್ನು  ಅತಿ ಹೆಚ್ಚು ಮಲಿನಗೊಳಿಸುವುದು ಪ್ರಯಾಣಿಕರು ತಿಂದು ಬಿಸಾಡುವ ಕಡಲೇಕಾಯಿ ಸಿಪ್ಪೆಯ ರಾಶಿ. ಪ್ರತಿ ಬೋಗಿಯಲ್ಲೂ ಇಂತಹ ರಾಶಿ ಕಾಣಸಿಗುತ್ತದೆ.

ರೈಲ್ವೆ ಸಿಬ್ಬಂದಿ ಪ್ರತಿ ದಿನ ಬೋಗಿಯನ್ನು ಸ್ವಚ್ಛ ಮಾಡಿದರೂ ಸಿಪ್ಪೆಯ ರಾಶಿ ಬೀಳುತ್ತಲೇ ಇರುತ್ತದೆ. ರೈಲು ನಮ್ಮೆಲ್ಲರ ಆಸ್ತಿ ಇದ್ದಂತೆ. ಸ್ವಚ್ಛ ಭಾರತ ಅಭಿಯಾನದತ್ತ ಹೆಜ್ಜೆ ಹಾಕುತ್ತಿರುವ ನಮ್ಮ ಜನಪ್ರತಿನಿಧಿಗಳು ಜನಸಾಮಾನ್ಯರಿಗೆ ರೈಲ್ವೆ ಸ್ವಚ್ಛತೆಯ  ಬಗ್ಗೆಯೂ ಕಿವಿ ಹಿಂಡಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.