ADVERTISEMENT

ಮೆರುಗು ಮೂಡುವುದೆ?

ಬಿ.ಎಸ್‌.ತಿಮ್ಮೋಲಿ, ಶಿವಮೊಗ್ಗ
Published 14 ಜನವರಿ 2015, 19:30 IST
Last Updated 14 ಜನವರಿ 2015, 19:30 IST

‘ಭಾರತೀಯ ರೈಲ್ವೆಯಂತೆಯೇ ಅಂಚೆ ಜಾಲ ಕೂಡ ದೇಶದ ಆರ್ಥಿಕತೆಗೆ ಚಾಲಕ ಶಕ್ತಿಯಾಗಬಹುದು ಎಂದು ಪ್ರಧಾನಿ ಹೇಳಿರುವುದು  (ಪ್ರ.ವಾ., ಜ. 8) ಗಮನಾರ್ಹ.  ಇದು ಸಾಕಾರ­ಗೊಳ್ಳ­ಬೇಕಾದರೆ  ಅಂಚೆ ಜಾಲದ ಕಾರ್ಯ­ಕ್ಷಮತೆ ­ಹೆಚ್ಚಿಸುವ ಕೆಲಸ ಮೊದಲು ಆಗ ಬೇಕು. ಅಂಚೆ ಸೇವೆಗಳ ಶೋಚನೀಯ ಸ್ಥಿತಿಗೆ ಖಾಸಗಿ ಕೊರಿಯರ್‌ ಸೇವಾ ಸಂಸ್ಥೆಗಳ ಜನಪ್ರಿಯತೆಯೇ ಕನ್ನಡಿ ಹಿಡಿ­ಯು­ತ್ತದೆ. 

ಬೆಂಗಳೂರಿನಂಥ ಮಹಾ­ನಗರ ಬಿಟ್ಟರೆ ಗ್ರಾಮೀಣ  ಪ್ರದೇಶಗಳಿಗೆ ಪತ್ರಗಳು ಆಮೆಗತಿಯಲ್ಲಿಯೇ ತಲುಪು­ತ್ತಿವೆ. ಅಂಚೆ ಪೆಟ್ಟಿಗೆಗಳು ಬಣ್ಣ ಕಳೆದು­ಕೊಂಡು ಇಲಾಖೆಯ ಪಳೆಯುಳಿಕೆ­ಗಳಂತೆ ಕಾಣು­ತ್ತಿವೆ. ಪೆಟ್ಟಿಗೆಗಳ ಮೇಲೆ ಕ್ಲಿಯರೆನ್‌್ಸ ವೇಳಾಪಟ್ಟಿಯೇ ನಮೂದಾ­ಗಿರುವುದಿಲ್ಲ. ಇಷ್ಟೊಂದು ಅಸಡ್ಡೆ ಏಕೆ? ಈ ನ್ಯೂನತೆಗಳು ನಿವಾರಣೆ­ ಆಗುವವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.