ಅಂತೂ ಇಂತೂ ಎರಡು ಪಕ್ಷಗಳ ಸಹಭಾಗಿತ್ವದಲ್ಲಿ ರೆಸಾರ್ಟ್‌ನಲ್ಲಿ ಗ್ರ್ಯಾಂಡ್ ರಿಹರ್ಸಲ್ ನಡೆಸಿದ ಬೃಹತ್ ಬೆಂಗಳೂರು ಮಹಾನಗರ ‘ದೋಚಿಕೆ’ಗೆ ಮುಖ್ಯಸ್ಥರನ್ನು ಆರಿಸುವ ನಾಟಕ ಯಶಸ್ವಿ ಪ್ರದರ್ಶನ ಕಂಡಿದೆ.
ಮಹಿಳಾ ಮೀಸಲಾತಿಯಿಂದಾಗಿ ಪ್ರಭಾವಿ ಪುರುಷ ರಾಜಕಾರಣಿಗಳು ಹೆಂಡಿರು, ಮಕ್ಕಳ ರೂಪದಲ್ಲಿ ಪರೋಕ್ಷವಾಗಿ ಆಯ್ಕೆಯಾಗಿದ್ದಾರೆ. ಮಹಿಳಾ ಕಾರ್ಪೋರೇಟರ್‌ಗಳನ್ನು ಇಂಥವರ ಹೆಂಡತಿ, ಇಂಥವರ ಸೊಸೆ ಎಂದೇ ಗುರುತಿಸುತ್ತಿರುವುದರಿಂದ ಪರೋಕ್ಷವಾಗಿ ಕಾರ್ಪೋರೇಟರ್‌ಗಳ ಸಂಖ್ಯೆ ಹೆಚ್ಚಿದ್ದು ಅಭಿವೃದ್ಧಿ ಹೇಗೆ ಆಗಬೇಕು ಎನ್ನುವುದನ್ನು ಅವರು ಆಮೂಲಾಗ್ರವಾಗಿ ತಿಳಿದವರಾದ್ದರಿಂದ ಗುರಿ ಮುಟ್ಟುವಲ್ಲಿ ಯಾವುದೇ ಅನುಮಾನವಿಲ್ಲ.
ರಾಜ್ಯದಲ್ಲಿ ಬರಗಾಲವಿದ್ದರೂ ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ಯಾವತ್ತೂ ಮೇವಿಗೆ ಬರವಿಲ್ಲ. ಈ ಕಾರ್ಪೊರೇಟರ್‌ಗಳ ಕೃಪಾಪೋಷಣೆಯಲ್ಲೇ ಬೃಹತ್ ಬೆಂಗಳೂರು ಮಹಾನಗರ ‘ದೋಚಿಕೆ’ಗೆ ಕಾಮಗಾರಿಗಳು ನಡೆಯಬೇಕಾಗಿದ್ದು ಭ್ರಷ್ಟ ಗುತ್ತಿಗೆದಾರರು ಈಗಾಗಲೇ ಹೂಗುಛ್ಛ ನೀಡಿ ಅಕ್ಕ-ಅಣ್ಣ ಎಂದು ಮೇವಿನ ಬೇಲಿಯೊಳಗೆ ತೂರಿಕೊಂಡಿರುತ್ತಾರೆ. ನಾಗರಿಕರು ಮೂಕಪ್ರಾಣಿಗಳಂತೆ ನೋಡಿಯೂ ನೋಡದಂತೆ ಬದುಕಬೇಕಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ ತಲುಪಿರುವ ಅನಿವಾರ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.