ADVERTISEMENT

ರಾಜಕೀಯ: ಸಾಹಿತಿ ಏಕೆ ಬೇಡ?

ಡಾ.ಸುಧಾ ಕೆ.
Published 10 ಏಪ್ರಿಲ್ 2014, 19:30 IST
Last Updated 10 ಏಪ್ರಿಲ್ 2014, 19:30 IST

ಸಾಹಿತ್ಯ ಕ್ಷೇತ್ರದಲ್ಲಿರುವವರು ರಾಜ­ಕೀಯದ ಕುರಿತು ತಟಸ್ಥ ನಿಲುವು ತೆಗೆದು­ಕೊಳ್ಳಬೇಕು ಎನ್ನುವುದು  ಕೆಲವರ
ಅಭಿ­ಪ್ರಾಯವಿರುವಂತಿದೆ. ಅಂದರೆ ರಾಜ­ಕೀಯ ಹೊಲಸು, ಅದನ್ನು ಏಕೆ ಸ್ವಾಮಿ ಮೆತ್ತಿಕೊಳ್ಳುತ್ತೀರಿ ಎಂಬ ಕಾಳಜಿಯೋ ಅಥವಾ ಯಾವುದೋ ಒಂದು ಪಕ್ಷಕ್ಕೆ ಬದ್ಧತೆ ತೋರುವುದರ ಕುರಿತು ಅಸಹ­ನೆಯೋ ಗೊತ್ತಾಗುತ್ತಿಲ್ಲ.   
  
ಸಮಾಜದ ಆಗು­ಹೋಗುಗಳಿಗೆ ಸಾಹಿತ್ಯ­­ಲೋಕ­ದವರು ಸ್ಪಂದಿಸ­ಲೇ­ಬಾರದೇ? ಸಮಾಜ ಗಬ್ಬು ನಾರುತ್ತಿರು­ವಾಗ ಅದರ ಬಗ್ಗೆ ಸಾಹಿತಿಗಳ ದನಿ ಮೊಳಗದೆ ಹೋದರೆ ಅಂಥ ಸಾಹಿತ್ಯ­ವನ್ನು ಕಟ್ಟಿಕೊಂಡು ಜನ­ಸಾಮಾನ್ಯರಿಗೆ ಏನಾಗಬೇಕಾಗಿದೆ? ಸಮಾ­ಜದ ಒಂದು ಭಾಗವಾಗಿರುವ ಸಾಹಿತಿ­ಗಳು,-ಕಲಾವಿದರು ಖಂಡಿತ ಪ್ರಗತಿಪರ, ಜನಪರ ರಾಜಕೀಯವನ್ನು ಬೆಂಬಲಿಸ­ಬೇಕಾಗುತ್ತದೆ.

ಕೆಲ ಸಾಹಿತಿಗಳಾದರೂ ಬಹಿರಂಗ­ವಾಗಿ ರಾಜಕೀಯದತ್ತ ಬಂದಿರುವುದು ಸ್ತುತ್ಯರ್ಹವೇ. ಆದರೆ ಒಂದು ಕೆಟ್ಟ ರಾಜಕೀಯ ಪಕ್ಷದಿಂದ ರೋಸಿಹೋಗಿ ಇನ್ನೊಂದು ಅಂಥಾದ್ದೇ ಪಕ್ಷದ ಪರ­ವಾಗಿ ನಿಲ್ಲುವ ಮೊದಲು ಅವರು ಯೋಚಿ­ಸುವುದು ಅವಶ್ಯ.
ಕೆಟ್ಟದ್ದನ್ನು ಒಳಿತಿನಿಂದ ಹೋರಾಡ­ಬೇಕೇ ಹೊರತು ಇನ್ನೊಂದು ಕೆಟ್ಟದ್ದ­ರಿಂದ ಅಲ್ಲ, ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.