ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯದ ಜತೆ ರಾಜಕೀಯ ಹಿಮ್ಮೇಳವೂ ಇತ್ತು. ಅಧ್ಯಕ್ಷರ ಭಾಷಣದಲ್ಲಿ ಸಾಹಿತ್ಯೇತರ ವಿಷಯಗಳ ಪ್ರಸ್ತಾಪ ಎದ್ದು ಕಾಣುತ್ತಿತ್ತು. ದೇವಸ್ಥಾನದ ಒಳಗೆ ಹೋಗಲು ಮುಜುಗರಪಟ್ಟವರು ದೇವರಂತೆ ಮೆರವಣಿಗೆಯಲ್ಲಿ ಹೋದದ್ದು ವಿಪರ್ಯಾಸವೇ ಸರಿ.
ಕನ್ನಡ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳುವುದು, ಗಡಿನಾಡ ಕನ್ನಡಿಗರಿಗೆ ರಕ್ಷಣೆ, ಎಲ್ಲಾ ಕಡೆಗಳಲ್ಲೂ ಕನ್ನಡದ ಬಳಕೆ ಮುಂತಾದ ವಿಚಾರಗಳಿಗೆ ಸರ್ಕಾರ ಒತ್ತು ಕೊಟ್ಟು ನಡೆದರೆ ಇಂತಹ ಸಮ್ಮೇಳನಕ್ಕೆ ಅರ್ಥ ಬರುತ್ತದೆ.
ಇಷ್ಟೊಂದು ಖರ್ಚು ಮಾಡಿ ಪ್ರತಿ ವರ್ಷ ಸಮ್ಮೇಳನ ನಡೆಸುವ ಔಚಿತ್ಯ ಪ್ರಶ್ನಾರ್ಹ. ಎರಡು ಅಥವಾ ಮೂರು ವರ್ಷಕ್ಕೊಮ್ಮೆ ನಡೆಸಿದರೂ ತಪ್ಪೇನಿಲ್ಲ. ಮನದಲ್ಲಿ ಕನ್ನಡದ ಜಾಗೃತಿಯಿದ್ದು, ಕನ್ನಡೇತರರಿಗೆ ಕನ್ನಡ ಕಲಿಸಿ ಮಾತನಾಡುವುದಕ್ಕೆ ಉತ್ತೇಜಿಸಿದರೆ ಅದಕ್ಕಿಂತ ಉತ್ತಮ ಕನ್ನಡ ಸೇವೆ ಇನ್ನೊಂದಿಲ್ಲ.
ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.