ADVERTISEMENT

ವಾರ್ಡ್‌ಗೊಂದು ಅಂಚೆ ಕಚೇರಿ ಬೇಕು

ಕುಂದು ಕೊರತೆ

ಚಂದ್ರಶೇಖರ
Published 23 ನವೆಂಬರ್ 2015, 19:30 IST
Last Updated 23 ನವೆಂಬರ್ 2015, 19:30 IST

ಬೆಂಗಳೂರು ನಗರದಲ್ಲಿರುವ ಅಂಚೆ ಕಚೇರಿಗಳು ನೀಡುತ್ತಿರುವ ಸೌಲಭ್ಯಗಳನ್ನು ಪಡೆಯಲು ಸಾರ್ವಜನಿಕರು ಹಾಗೂ ಗ್ರಾಹಕರು ಸಾಲಿನಲ್ಲಿ ನಿಲ್ಲಬೇಕಾದ ಹಾಗೂ ಕನಿಷ್ಠ ಅರ್ಧ ತಾಸಿನಿಂದ 2–3 ಗಂಟೆಗಳ ಕಾಲ ಸರದಿಯಲ್ಲಿ ನಿಲ್ಲಬೇಕಾದ ದುಸ್ಥಿತಿ ತಲೆದೋರಿದೆ. ಇತ್ತೀಚೆಗೆ ಬೆಂ.ವಿ.ಕಂ. ಬಿಲ್‌ಗಳನ್ನು ಪಾವತಿಸಲು ಅನುಕೂಲ ಕಲ್ಪಿಸಿ ಕೊಟ್ಟಿರುವುದರಿಂದ ಮತ್ತಷ್ಟು ಕಾಲ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ. ಒಂದು ಅಂಚೆ ಕಾರ್ಡನ್ನು ಖರೀದಿಸಲು ಸಹ ಗಂಟೆಗಟ್ಟಲೆ ನಿಲ್ಲಬೇಕಾದ ಪರಿಸ್ಥಿತಿ ಇರುವುದು ಶೋಚನೀಯ.

ಈ ಅನಾನುಕೂಲವನ್ನು ತಪ್ಪಿಸಿ ಗ್ರಾಹಕರಿಗೆ ಶೀಘ್ರ ಹಾಗೂ ತ್ವರಿತವಾಗಿ ಸೇವೆ ನೀಡಲು ಪಾಲಿಕೆಯ ಪ್ರತಿಯೊಂದು ವಾರ್ಡ್‌ನಲ್ಲಿ ಕನಿಷ್ಠ ಒಂದಾದರೂ ಅಂಚೆ ಕಚೇರಿಯನ್ನು ತೆರೆದು ಸ್ಥಳೀಯ ಜನತೆಗೆ ಹತ್ತಿರದಲ್ಲಿ ಹಾಗೂ ಕಡಿಮೆ ಸಮಯದಲ್ಲಿ ಸೌಲಭ್ಯ ಒದಗಿಸಲು ಮತ್ತು ವೇಗವಾದ ಅಂಚೆ ಸೇವೆಯನ್ನು (ಸ್ಪೀಡ್‌ ಪೋಸ್‌್ಟ) ಈ ಹಿಂದಿನಂತೆ ಸಂಜೆ 6 ಗಂಟೆಯವರೆವಿಗೂ ಸ್ವೀಕರಿಸುವ ವ್ಯವಸ್ಥೆಯನ್ನು ಕಲ್ಪಿಸಲು  ಅಂಚೆ ಇಲಾಖೆಯ ಮುಖ್ಯ ಅಂಚೆ ಮಹಾ ನಿರ್ದೇಶಕರನ್ನು(ಕರ್ನಾಟಕ) ಕೋರಿಕೊಳ್ಳುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.