ಎಂ.ಎಂ. ಕಲಬುರ್ಗಿಯವರು ನಮಗೆ ಪ್ರಾಚೀನ ಕರ್ನಾಟಕ ಚರಿತ್ರೆಯನ್ನು ಹೇಳುವಾಗ ವೀರ ಗರುಡರನ್ನೂ ಕುರಿತು ಪಾಠ ಮಾಡಿದ್ದರು. ಪ್ರತಿಯೊಬ್ಬ ಅರಸರಲ್ಲಿ, ಅವರಿಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ವೀರಗರುಡರ ಪಡೆ ಇರುತ್ತಿತ್ತು. ರಾಜರು ಯುದ್ಧಕ್ಕೆ ಸನ್ನದ್ಧರಾದಾಗ ಈ ಗರುಡರು ಸೈನ್ಯದ ಮುಂದೆ ನಿಂತು ತಮ್ಮ ರುಂಡಗಳನ್ನು ಕಡಿದುಕೊಂಡು ಆತ್ಮಾಹುತಿ ಮಾಡಿಕೊಳ್ಳುವ ಮೂಲಕ ರಣೋತ್ಸಾಹವನ್ನು ತುಂಬುತ್ತಿದ್ದ ವೀರ ಪಡೆಯದು.
ಈಗ ಪ್ರೊ. ಕಲಬುರ್ಗಿಯವರ ಹತ್ಯೆಯನ್ನು ಖಂಡಿಸಿ, ಅವರ ಸಮ್ಮುಖದಲ್ಲಿ ಅವರ ಕೈಯಿಂದಲೇ ಪಡೆದ ಅರಳು ಪ್ರಶಸ್ತಿ, ಫಲಕ, ನಗದು ಬಹುಮಾನಗಳನ್ನು ಹಿಂತಿರುಗಿಸಿದ ಐವರು ಸಾಹಿತಿಗಳು ಪ್ರೊ.ಕಲಬುರ್ಗಿ ಬಗ್ಗೆ ತೋರಿಸಿದ ಅಭಿಮಾನ ಅನನ್ಯ! ಅದು ಕರ್ನಾಟಕದ ಪ್ರಾಚೀನ ವೀರಗರುಡರ ನಿಷ್ಠೆಯನ್ನು ನೆನಪಿಸುತ್ತದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.