ತಮ್ಮ ಕಾಲಿಗೆರಗಿ ನಮಸ್ಕರಿಸುವುದನ್ನು ನಿಲ್ಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ನೂತನ ಸಂಸದರಿಗೆ ಕಿವಿಮಾತು ಹೇಳಿದ್ದಾರೆ. (ಪ್ರ.ವಾ. ಜೂ.7) ಹೊಗಳುಭಟರು ಪ್ರಧಾನಿಯವರ ಮಾತನ್ನು ಪಾಲಿಸಬೇಕು. ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಪೂಜೆಗೆ ಅವಕಾಶವಿಲ್ಲ. ಸಂಸದರು ತಮ್ಮ ಪ್ರಭುಗಳಾದ ಮತದಾರರ ಹಾಗೂ ಮತ ಕ್ಷೇತ್ರದಲ್ಲಿನ ಸಮಸ್ಯೆಗಳ ಪರಿಹಾರದತ್ತ ಆಸಕ್ತರಾಗಬೇಕು.
ಸಂವಿಧಾನವು ಮತದಾರರಿಗೆ ಪ್ರತಿನಿಧಿಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಹಕ್ಕು (ರೈಟ್ ಟು ರಿಕಾಲ್). ನೀಡದಿರುವುದರಿಂದ ಮತದಾರರು ನಿಸ್ಸಹಾಯಕರಾಗಿರುತ್ತಾರೆ. ಕ್ಷೇತ್ರದ ಮತದಾರರಿಗೆ ಸಂಸದರ ದರ್ಶನಕ್ಕೆ ಇನ್ನೊಂದು ಚುನಾವಣೆ ಯವರೆಗೆ ಕಾಯಬೇಕಾದ ಸಂದರ್ಭ ಬಾರದಿರಲಿ.
–ಸದಾನಂದ ಹೆಗಡೆಕಟ್ಟೆ ಮೂಡುಬಿದಿರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.