ADVERTISEMENT

ಶಸ್ತ್ರಚಿಕಿತ್ಸೆ: ಪುರುಷರಿಗೇಕಿಲ್ಲ?

ವಿಶಾಲಾಕ್ಷಿ ಶರ್ಮಾ
Published 13 ನವೆಂಬರ್ 2014, 19:30 IST
Last Updated 13 ನವೆಂಬರ್ 2014, 19:30 IST

ಛತ್ತೀಸಗಡದ ಬಿಲಾಸಪುರದಲ್ಲಿ ಸಂತಾನಶಕ್ತಿ ಹರಣ  ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರಲ್ಲಿ 13 ಮಂದಿ ಸಾವನ್ನಪ್ಪಿ, ಇನ್ನೂ ಕೆಲವರು ಚಿಂತಾಜನಕ ಸ್ಥಿತಿಯಲ್ಲಿರುವುದು ಆಘಾತಕಾರಿ. ಸರ್ಕಾರ  ನೀಡಿದ ಗುರಿ  ಮುಟ್ಟುವ  ಆತುರದಲ್ಲಿ ವೈದ್ಯರಿಂದಾದ ಈ ಅಚಾತುರ್ಯ ಅಕ್ಷಮ್ಯ.  

ಹೆಣ್ಣು ಯೌವನಕ್ಕೆ  ಕಾಲಿಟ್ಟಾಗಿನಿಂದ  ಪ್ರತಿ  ತಿಂಗಳು ಮುಟ್ಟಾಗುವುದು,  ನಂತರ  ಮಕ್ಕಳನ್ನು  ಹೊತ್ತು- ಹೆತ್ತು ಹಾಲೂಡಿಸಿ ಸಲಹುವುದು ಪ್ರಕೃತಿ ನಿಯಮ. ಆದರೆ  ಈ  ಶಸ್ತ್ರಚಿಕಿತ್ಸೆಯನ್ನಾದರೂ ಪುರುಷರು  ಮಾಡಿಸಿಕೊಳ್ಳಬಹುದಲ್ಲವೇ? ಪುರುಷರಿಗೆ  ಈ ಚಿಕಿತ್ಸೆ ಮಾಡಿಸುವುದು  ಅತ್ಯಂತ  ಸರಳ  ಮತ್ತು ಸುಲಭ ಎಂದು ಹೇಳಲಾಗುತ್ತದೆ. ಆದರೂ ಈ ವಿಷಯದಲ್ಲೂ ಮಹಿಳೆಯೇ  ಶೋಷಿತಳು.  

ಈಗ ಮೃತರಾದ ಮಹಿಳೆಯರು ಇನ್ನೂ ಚಿಕ್ಕ ವಯಸ್ಸಿನವರು. ಇನ್ನೂ ಪುಟಾಣಿಗಳಾಗಿರುವ ಅವರ ಮಕ್ಕಳನ್ನು  ನೋಡಿಕೊಳ್ಳುವವರಾರು? ಇದೇ ನೆಪದಲ್ಲಿ ಅವರ ಗಂಡಂದಿರು ತಿಂಗಳೊಪ್ಪತ್ತಿನಲ್ಲೇ ಮರುಮದುವೆಯಾದರೂ ಆಶ್ಚರ್ಯವಿಲ್ಲ. ಆಗ  ಆ ಮಕ್ಕಳೆಲ್ಲ ನಿಜಕ್ಕೂ ಅನಾಥರಾಗುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.