ADVERTISEMENT

ಶಾಲೆಗಳಲ್ಲಿ ವ್ಯಾಪಾರ ಬೇಡ

ಪ್ರಹ್ಲಾದ್ ವಾ.ಪತ್ತಾರ
Published 5 ಮೇ 2017, 19:30 IST
Last Updated 5 ಮೇ 2017, 19:30 IST

ಖಾಸಗಿ ಶಾಲೆಗಳಲ್ಲಿ ಪುಸ್ತಕ, ಸಮವಸ್ತ್ರ, ಶಾಲಾ ಬ್ಯಾಗ್, ಲೇಖನ ಸಾಮಗ್ರಿಗಳನ್ನು ಮಾರುವಂತಿಲ್ಲ ಎಂದು  ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿರುವುದು  ಸ್ವಾಗತಾರ್ಹ (ಪ್ರ.ವಾ., ಮೇ 4).

ಲಾಭರಹಿತ ಸೇವೆ ನೀಡಬೇಕಾದ ಶಾಲೆಗಳು ಇಂದು  ಸರಕು ಮಾರುವ  ಅಂಗಡಿಗಳಾಗಿಹೋಗಿವೆ. ಶಾಲೆಯಲ್ಲಿ  ಕಲಿಯುವ ಮಕ್ಕಳೇ ಗ್ರಾಹಕರು. ಪ್ರತಿಷ್ಠಿತ ಶಾಲೆಗಳು ಪ್ರತಿವರ್ಷ  ಮೇ, ಜೂನ್ ತಿಂಗಳಲ್ಲಿ  ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತವೆ. ಜತೆಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಿ ಪೋಷಕರ ಮೇಲೆ ಆರ್ಥಿಕ ಹೊರೆ ಹೊರಿಸುತ್ತವೆ. 

ಶಾಲೆ ಸೂಚಿಸಿದಲ್ಲಿಂದ ಅಥವಾ ಶಾಲೆಯಲ್ಲೇ ಕಡ್ಡಾಯವಾಗಿ ಸಾಮಗ್ರಿ ಖರೀದಿ ಮಾಡಬೇಕು ಎಂಬ ನಿಯಮವನ್ನೂ ಹೇರುವುದರಿಂದ  ಪೋಷಕರು ಅನಿವಾರ್ಯವಾಗಿ ಶೋಷಣೆಗೆ ಒಳಗಾಗುತ್ತಾರೆ. ಮಕ್ಕಳ ಶಿಕ್ಷಣದ ಮೇಲೆ ಪ್ರಭಾವ ಬೀರದಿರಲಿ ಎಂಬ ಕಾರಣಕ್ಕೆ ಪೋಷಕರೂ ತುಟಿ ಪಿಟಕ್‌ ಎನ್ನುತ್ತಿಲ್ಲ. 

ಈ ಚಟುವಟಿಕೆಗಳನ್ನು ನಿಷೇಧಿಸಿರುವ ಸರ್ಕಾರದ ಕ್ರಮವನ್ನು ‘ಕ್ಯಾಮ್ಸ್’ ತೀವ್ರವಾಗಿ ವಿರೋಧಿಸಿರುವುದು ವಿಷಾದನೀಯ. ಶಾಲೆಗಳು ವಾಣಿಜ್ಯ ಕೇಂದ್ರಗಳಾಗದೆ,  ಶಿಕ್ಷಣ ಅರಸಿ ಬರುವ ಆಕಾಂಕ್ಷಿಗಳಿಗೆ ಜ್ಞಾನ ನೀಡುವ ದೇಗುಲಗಳಾಗಬೇಕು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT