ಮಧ್ಯಪ್ರದೇಶದಲ್ಲಿ ರೈತರ ಮೇಲಿನ ಗೋಲಿಬಾರ್ ಘಟನೆ ಆತಂಕಕಾರಿಯಾದುದು. ಆದರೆ ಮಾಧ್ಯಮಗಳು ನೀಡುತ್ತಿರುವ ಪ್ರಚಾರದ ಪರಿ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆಯಷ್ಟೆ. ಹೇಗೆ ರೈತರ ಆತ್ಮಹತ್ಯೆ ಅವರ ಸಮಸ್ಯೆಗೆ ಪರಿಹಾರವಲ್ಲವೋ ಹಾಗೆಯೇ ಸರ್ಕಾರಗಳು ಮಾಡುವ ಸಾಲಮನ್ನಾ ಕೂಡ ನೈಜ, ಶಾಶ್ವತ ಪರಿಹಾರ ಅಲ್ಲ. ರಾಜಕೀಯ ಪಕ್ಷಗಳ ‘ರೈತ ಮೋರ್ಚಾ’ದಂತಹ ಘಟಕಗಳು ರೈತ ಚಳವಳಿಗಳ ಪರ ಅಥವಾ ವಿರುದ್ಧ ಮಾತನಾಡುವುದು, ರಾಜ್ಯದ ನೇತಾರರಿಗೆ ವೇದಿಕೆ ಒದಗಿಸುವುದು ಬಿಟ್ಟರೆ ಸಾಮಾನ್ಯ ರೈತರಿಗೆ ಉಪಯುಕ್ತ ಅಲ್ಲ. ಮಳೆ ಬಂದು ಚಳವಳಿ ತಣ್ಣಗಾಗುತ್ತದೆ ಎಂದು ಯೋಚಿಸುವುದಕ್ಕಿಂತ, ರೈತರ ಬಗೆಗೆ ಕಾಳಜಿ ಇರುವವರೆಲ್ಲ ‘ಮನ್ನಾ’ದ ಆಚೆಗಿನ ಅಂಶಗಳನ್ನು ವ್ಯಾಪಕವಾಗಿ ಚರ್ಚಿಸುವುದು ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.