ADVERTISEMENT

ಶಾಸ್ತ್ರೀಯ ಕನ್ನಡ ಕೇಂದ್ರ ಸ್ಥಳಾಂತರವಾಗಲಿ

ಎಂ.ಚಿದಾನಂದಮೂರ್ತಿ
Published 12 ಫೆಬ್ರುವರಿ 2014, 19:30 IST
Last Updated 12 ಫೆಬ್ರುವರಿ 2014, 19:30 IST

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತು, ಅದರ ಫಲವಾಗಿ ಶಾಸ್ತ್ರೀಯ ಕನ್ನಡ ಉನ್ನತ ಕೇಂದ್ರವನ್ನು ಮೈಸೂರಿನ ಸಿ.ಐ.ಐ.ಎಲ್‌. ಆವರಣದಲ್ಲಿ ಮೊದಲ ಹೆಜ್ಜೆಯಾಗಿ ಆರಂಭ ಮಾಡಲಾಗಿದೆ. ಹಿಂದೆ ತಮಿಳಿನ ಉನ್ನತ ಅಧ್ಯಯನ ಕೇಂದ್ರವು ವಿಧ್ಯುಕ್ತವಾಗಿ ಮೈಸೂರಿನಲ್ಲಿ ಆರಂಭವಾಗಿ, ಅದೊಂದು ಸ್ವತಂತ್ರ ಸಂಸ್ಥೆಯಾಗಿ ಕಾರ್ಯಶೀಲವಾಗಲು ಅದನ್ನು ಚೆನ್ನೈಗೆ ವರ್ಗಾವಣೆ ಮಾಡಲಾಗಿದೆ. ಅಲ್ಲಿ ಆಗಲೇ ಸಾಕಷ್ಟು ಕೆಲಸಗಳು ನಡೆದಿವೆ.

ಆದರೆ ಮೈಸೂರಿನ ಸಿ.ಐ.ಐ.ಎಲ್‌. ಅಧೀನದಲ್ಲಿರುವ ಶಾಸ್ತ್ರೀಯ ಕನ್ನಡ ಉನ್ನತ ಕೇಂದ್ರವು ಏನೂ ಕೆಲಸ ಮಾಡುತ್ತಿಲ್ಲ. ಅಲ್ಲಿ ಮೂಲ ಸೌಲಭ್ಯ, ಜಾಗದ ಕೊರತೆ ಇದೆ. ಅಲ್ಲಿ ಇತರ ಕಾರ್ಯಗಳು ನಡೆಯುತ್ತಿರುವು ದರಿಂದ ಶಾಸ್ತ್ರೀಯ ಕನ್ನಡ ಉನ್ನತ ಕೇಂದ್ರದ ಕಡೆ ಹೆಚ್ಚು ಗಮನ ಕೊಡಲಾಗುತ್ತಿಲ್ಲ.

ಅದರ ಜೊತೆ ಅಲ್ಲಿಯ ನಿರ್ದೇಶಕ­ರಿಗೆ ಆ ಬಗ್ಗೆ ಅಂತಹ ಆಸಕ್ತಿಯೂ ಇಲ್ಲ. ಆ ಕೇಂದ್ರ ಬೆಂಗಳೂರಿನಲ್ಲಿ ಆರಂಭ­ಗೊಳ್ಳಲು ಕರ್ನಾಟಕ ಸರ್ಕಾರ ಜ್ಞಾನಭಾರತಿ ಆವರಣ ದಲ್ಲಿ ಮೂರು ಎಕರೆ ಜಮೀನು ನೀಡಿದೆ. ಅದು ಒಬ್ಬ ನಿರ್ದೇಶಕರ ಮಾರ್ಗದರ್ಶನ ದಲ್ಲಿ ಸ್ವತಂತ್ರ ಸಂಸ್ಥೆಯಾಗಿ ಕೆಲಸ ಮಾಡು­ವಂತೆ ಆಗಬೇಕಾದರೆ ಕೇಂದ್ರದಲ್ಲಿರುವ ರಾಜ್ಯದ ಸಚಿವರು, ಉನ್ನತ ಅಧಿಕಾರಿಗಳ ಜೊತೆ ಮಾತನಾಡಿ, ಆ ಕೇಂದ್ರ ಮೈಸೂರಿ ನಿಂದ ಬೆಂಗಳೂ­ರಿಗೆ ಸ್ಥಳಾಂತರವಾಗಬೇಕು ಎಂದು ಒತ್ತಾಯ ಹಾಕುವುದು ಅಗತ್ಯ. ಬೆಂಗಳೂರಲ್ಲಿ ಇದು ಆರಂಭವಾದಲ್ಲಿ ‘ಶಾಸ್ತ್ರೀಯ ಕನ್ನಡ ಉನ್ನತ ಪರಿಣತರ ಸಲಹಾ ಸಮಿತಿ’, ‘ಅಭಿವೃದ್ಧಿ ಮಂಡಳಿ’­ಗಳನ್ನು ರಚಿಸಿ ಮುಂದಿನ ಕಾರ್ಯಗಳನ್ನು ನಿಯೋಜಿಸಲು ಅನುಕೂಲವಾಗುತ್ತದೆ.
  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.