ವಿಶ್ವಸಂಸ್ಥೆಯ ಸುಧಾರಣೆಗೆ ಸಂಬಂಧಿಸಿದ ಸಂಪಾದಕೀಯ (ಪ್ರ.ವಾ., ಅ. 28) ಸಕಾಲಿಕ. ಬದಲಾವಣೆ ಜಗತ್ತಿನ ನಿಯಮ, ಅಂತಹುದರಲ್ಲಿ 1945ರಲ್ಲಿ ಸ್ಥಾಪಿತವಾದ ವಿಶ್ವ ಸಂಸ್ಥೆಯ ಸುಧಾರಣೆ 70 ವರ್ಷವಾದರೂ ಆಗದೇ ಇರುವುದು ದುರದೃಷ್ಟಕರ. ಜಾಗತೀಕರಣದ ಇಂದಿನ ಯುಗದಲ್ಲಿ ವಿಶ್ವಮಾನ್ಯ ಸಂಸ್ಥೆಯ ಸುಧಾರಣೆಗೆ ಭಾರತ ಸೇರಿದಂತೆ ಹಲವು ದೇಶಗಳು ಕೇಳುತ್ತಿರುವುದು ಅರ್ಥಪೂರ್ಣ.
ಭಾರತ, ವಿಶ್ವದ ಆರನೇ ಒಂದರಷ್ಟು ಜನಸಂಖ್ಯೆಯನ್ನು ಹೊಂದಿದೆ. ಭಾರತ ಮೂಲದವರು ಹಲವಾರು ದೇಶಗಳಲ್ಲಿ ನೆಲೆಸಿದ್ದಾರೆ. ಅಲ್ಲದೆ, ವಿಶ್ವ ಸಂಸ್ಥೆಯ ಶಾಂತಿ ಪಾಲನಾ ಪಡೆಯೂ ಸೇರಿದಂತೆ ಜಾಗತಿಕ ಸಂಸ್ಥೆಗಳಲ್ಲಿ ತನ್ನದೇ ಆದ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಹಾಗಾಗಿ ಭಾರತ ವಾದ ಸಮರ್ಥನೀಯ. ವಿಶ್ವಸಂಸ್ಥೆಯ ದೊಡ್ಡಣ್ಣಗಳಂತಿರುವ ಪಿ-5 ದೇಶಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಹಾಗೂ ರಾಜಕೀಯೇತರ ಕಾರಣಗಳಿಂದಾಗಿ ಸುಧಾರಣೆಗೆ ಬೆಂಬಲ ಸೂಚಿಸುತ್ತಿಲ್ಲ. ಸುಧಾರಣೆಯಾಗದೆ ಹೋದರೆ ಈ ಸಂಸ್ಥೆಯ ಪ್ರಸ್ತುತವೇ ಪ್ರಶ್ನಾರ್ಹವಾಗುವ ಅಪಾಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.