‘ರೈತರ ಆತ್ಮಹತ್ಯೆ ತಡೆಗೆ ಇದೆ ಪರಿಹಾರ’ ಲೇಖನದಲ್ಲಿ ಕ್ಯಾಪ್ಟನ್ ಗೋಪಿನಾಥ್ ಅವರು (ಪ್ರ.ವಾ., ಜುಲೈ 15) ತಾವು ಕನ್ನಡ ನಾಡಿನ ಸಣ್ಣ ಹಳ್ಳಿಯೊಂದರ ಸರ್ಕಾರಿ ಕನ್ನಡ ಶಾಲೆಯಲ್ಲಿ ಓದಿದ್ದಾಗಿ ಬರೆದಿದ್ದಾರೆ. ಹಾಗಾಗಿ ಇವರು ರೈತರ ಆತ್ಮಹತ್ಯೆ ತಡೆಗೆ ಸರಿಯಾದ ಪರಿಹಾರ ಸೂಚಿಸಿರಬಹುದೆಂದು ಒಂದೂ ಅಕ್ಷರ ಬಿಡದೆ ಕಡೆಯವರೆಗೂ ಓದಿದೆ.
ಆದರೆ ಅವರು ಕೊನೆಯಲ್ಲಿ ಸೂಚಿಸಿರುವ ಪರಿಹಾರ ನೋಡಿದ ಮೇಲೆ ಬೆಂಗಳೂರಿನ ಯಾವುದೋ ಶ್ರೀಮಂತ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ಹದಿಹರೆಯದ ಹುಡುಗನೊಬ್ಬ ಸೂಚಿಸಬಹುದಾದ ಪರಿಹಾರಕ್ಕಿಂತ ಮೇಲ್ಮಟ್ಟದ್ದೇನೂ ಆಗಿಲ್ಲ ಎನಿಸಿ ನಿರಾಸೆಯಾಯಿತು. ಇಡೀ ಅರ್ಥ ವ್ಯವಸ್ಥೆ ಕೃಷಿಯ ಮೇಲೆ ನಿಂತಿದೆ ಎಂದು ನಾವು ಭಾವಿಸಿದ್ದರೆ, ಅವರು ಅರ್ಥ ವ್ಯವಸ್ಥೆಯನ್ನು ಸಾಫ್‌್ಟವೇರ್ ಮೇಲೆ ನಿಲ್ಲಿಸಿ ಇಡೀ ಕೃಷಿಕ ವರ್ಗ ವಾರಾಂತ್ಯದಲ್ಲಿ ಓಡಿಬರುವ ಟೆಕ್ಕಿಗಳು ಎಸೆಯುವ ಹಸಿರು ನೋಟನ್ನು ಅವಲಂಬಿಸಿ ಬದುಕಬೇಕೆಂದು ಸೂಚಿಸುತ್ತಾರೆ. ಐದು ಸಾವಿರ ವರ್ಷದ ಕೃಷಿ ಸಂಸ್ಖೃತಿಗೆ ನಿನ್ನೆ ಮೊನ್ನೆ ಹುಟ್ಟಿಕೊಂಡ ಅಪಾಯಕಾರಿ ಪ್ರವಾಸೋದ್ಯಮದ ಮೂಲಕ ಪರಿಹಾರ ಸೂಚಿಸಿರುವುದು ಬಾಲಿಶವಾಗಿ ಕಾಣುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.