ಪ್ರೊ.ಗಣೇಶ ನಾಯಿಕ ಅವರ ‘ಸೇವಾ ಭದ್ರತೆ ಒದಗಿಸಿ’ (ವಾ.ವಾ., ಜ. 20) ಎಂಬ ಮನವಿ ಅರ್ಥವಾಗದ ಹಾಗೂ ಸೋಜಿಗದ ವಿಷಯವಾಗಿದೆ. ಪ್ರಸ್ತುತ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೇವಲ 2,160 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ತುಂಬಲು ಮುಂದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಸಿದ್ಧತೆ ಕುಂಟುತ್ತಾ ಸಾಗಿದೆ. ಇದರ ಜೊತೆಗೆ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಮುಂದೆ ನೇಮಕಾತಿ ಪ್ರಕ್ರಿಯೆಯು ನ್ಯಾಯಾಲಯ, ಸರ್ಕಾರದ ನಿರ್ಧಾರಕ್ಕೆ ಒಳಪಟ್ಟಿರುತ್ತದೆ ಎಂಬ ಹೇಳಿಕೆ ನೀಡಿದೆ.
ಪರಿಸ್ಥಿತಿ ಹೀಗಿರುವಾಗ ಗಣೇಶ ಅವರು ಹೊಸ ನೇಮಕಾತಿಯಿಂದ 14,500 ಅತಿಥಿ ಉಪನ್ಯಾಸಕರು ವೃತ್ತಿಯಿಂದ ಹೊರಬೀಳುವ ಸಾಧ್ಯತೆಯಿದೆ ಎಂಬ ನಿಲುವನ್ನು ವ್ಯಕ್ತಪಡಿಸಿರುವುದು ಆಶ್ಚರ್ಯಕರ. ಬರೀ 2,160 ಹುದ್ದೆಗಳ ನೇಮಕಾತಿಯಿಂದ 14,500 ಅತಿಥಿ ಉಪನ್ಯಾಸಕರು ಹೇಗೆ ಕೆಲಸದಿಂದ ವಂಚಿತರಾಗುತ್ತಾರೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.