ADVERTISEMENT

ಸಾಹಿತ್ಯಾಸಕ್ತ ಸಂಘಟನೆಗಳು ಸಹಕರಿಸಲಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 18:26 IST
Last Updated 26 ಸೆಪ್ಟೆಂಬರ್ 2021, 18:26 IST

ಶತಮಾನ ದಾಟಿದ ಈ ನಾಡಿನ ಭಾಷೆಯ ಪ್ರತೀಕದ ಸಂಕೇತವಾದ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಹೆಚ್ಚಿಸಲು ಈಗಿನ ಆಡಳಿತಾಧಿಕಾರಿಗಳು ಮುತುವರ್ಜಿ ವಹಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ರಾಜ್ಯದಲ್ಲಿ ಇರುವ ನೂರಾರು ಸಾಂಸ್ಕೃತಿಕ ಹಾಗೂ ಸಾಹಿತ್ಯ ಸಂಘಟನೆಗಳ ಮಾತೃಸಂಸ್ಥೆ ಇದು. ರಾಜ್ಯದ ಜನಸಂಖ್ಯೆಯ ಅರ್ಧದಷ್ಟು ಮಂದಿ ಪರಿಷತ್ತಿನ ಸದಸ್ಯರಾದರೂ ಸಂಸ್ಥೆಯು ಯಾವುದೇ ಸಮ್ಮೇಳನಕ್ಕೆ ಸರ್ಕಾರದ ಮುಂದೆ ಕೈಯೊಡ್ಡುವ ಪ್ರಸಂಗ ಬರಲಾರದು. ಇದನ್ನು ಮನಗಂಡು ಆಡಳಿತಾಧಿಕಾರಿಗಳು ಸದಸ್ಯತ್ವ ನೋಂದಣಿಯನ್ನು ಹೆಚ್ಚಿಸಲು ಅಂತರ್ಜಾಲ ದಲ್ಲಿ ಅರ್ಜಿಯ ಫಾರಂ ದೊರಕುವಂತೆ ಮಾಡಿದ್ದಾರೆ.

ದೇಶ-ವಿದೇಶಗಳಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ತಾಂತ್ರಿಕತೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದ ಕೌಶಲವನ್ನು ಪರಿಷತ್ತು ಬಳಸಿಕೊಂಡು, ಪರಿಷತ್ತಿನ ಅಂತರ್ಜಾಲದ ಮುಖಪುಟದ ವಿನ್ಯಾಸವನ್ನು ಇನ್ನೂ ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲಿ. ನೂತನ ಸದಸ್ಯತ್ವ ಪಡೆಯುವವರು ನೇರವಾಗಿ ಪರಿಷತ್ತಿನ ಬ್ಯಾಂಕ್ ಖಾತೆಗೆ
ಹಣ ಜಮಾ ಮಾಡಲು ಅನುವಾಗುವ ರೀತಿಯಲ್ಲಿ ನೋಡಿಕೊಳ್ಳಬೇಕು. ಪರಿಷತ್ತಿನ ಇತಿಹಾಸ, ಪ್ರಸ್ತುತ ವಿದ್ಯಮಾನಗಳು, ಪರಿಷತ್ತು ನಡೆಸುವ ಕಾರ್ಯಕ್ರಮಗಳು, ಪರಿಷತ್ತಿನ ಅಂಗರಚನೆ, ಸದಸ್ಯರ ವಿವರದಂತಹ ಮಾಹಿತಿಗಳು ಸಾರ್ವಜನಿಕರಿಗೆ ಸುಲಭವಾಗಿ ದೊರಕುವಂತೆ ಮಾಡಬೇಕು. ಈ ದಿಸೆಯಲ್ಲಿ ರಾಜ್ಯದಲ್ಲಿ ಇರುವ ಸಾಹಿತ್ಯಾಸಕ್ತ ಸಂಘಟನೆಗಳು ಪರಿಷತ್ತಿನೊಂದಿಗೆ ಸಹಕರಿಸಲಿ.

– ಗಣಪತಿ ನಾಯ್ಕ್,ಕಾನಗೋಡ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.