ADVERTISEMENT

ಶನಿವಾರ, 22–6–1968

​ಪ್ರಜಾವಾಣಿ ವಾರ್ತೆ
Published 21 ಜೂನ್ 2018, 16:20 IST
Last Updated 21 ಜೂನ್ 2018, 16:20 IST
   

ಮಂಡ್ಯ ಪೇಪರ್ ಮಿಲ್: ವಿಸ್ತರಣೆಗೆ 5 ಕೋಟಿ ರೂ. ವೆಚ್ಚದ ಯೋಜನೆ

ಬೆಂಗಳೂರು, ಜೂ. 21– ಮಂಡ್ಯ ನ್ಯಾಷನಲ್ ಪೇಪರ್ ಮಿಲ್ಸ್‌ನ ವಿಸ್ತರಣೆ ಮತ್ತು ಕಾರ್ಯವಿಧಾನದ ಪರಿಷ್ಕರಣಕ್ಕೆ, ಮಿಲ್ಲಿನಲ್ಲಿ ಈಗ ಸಹಭಾಗಿಗಳಾಗಿರುವ ಅಮೇರಿಕದ ‘ಪಾರ್ಸನ್ಸ್ ಅಂಡ್‌ ವಿಟ್ಟಮೋರ್’ ಸಂಸ್ಥೆಯವರು ಸುಮಾರು 5 ಕೋಟಿ ರೂಪಾಯಿಗಳ ಯೋಜನಾ ವರದಿಯೊಂದನ್ನುತಯಾರಿಸುತ್ತಿದ್ದಾರೆ.

ಮೈಸೂರು ವಾರ್‍ಸಿಟಿ ಪಿಯುಸಿ ಇಬ್ಬರಿಗೆ ಪ್ರಥಮ ಸ್ಥಾನ

ADVERTISEMENT

ಮೈಸೂರು, ಜೂ. 21– ಮೈಸೂರು ವಿಶ್ವವಿದ್ಯಾನಿಲಯದ ಪಿ.ಯು.ಸಿ. ಪರೀಕ್ಷೆಯ ಪ್ರಥಮ ಸ್ಥಾನ ಈ ಸಲ ಇಬ್ಬರಿಗೆ. ಮೈಸೂರು ನಗರದ ಶಾರದಾ ವಿಲಾಸ ಕಾಲೇಜಿನ ಸಚ್ಚಿದಾನಂದ ಈ ಪೈಕಿ ಒಬ್ಬ. ಕುಂದಾಪುರದ ಭಂಡಾರ್‌ಕರ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ನಾಮದೇವ ಪ್ರಭು ಬಸ್ರೂರ್ ಇವನಿಗೂ ಅಗ್ರಸ್ಥಾನ.

ಮಂಗಳೂರು ಗೊಬ್ಬರದ ಕಾರ್ಖಾನೆ ನಿರ್ಮಾಣ: ಶೀಘ್ರವೇ ಕಾರ್ಯಾರಂಭ

ಬೆಂಗಳೂರು, ಜೂ. 21– 60 ಕೋಟಿ ರೂಪಾಯಿಗಳ ಮಂಗಳೂರು ಗೊಬ್ಬರ ಕಾರ್ಖಾನೆಯ ನಿರ್ಮಾಣದ ಪ್ರಾರಂಭಿಕ ಕಾರ್ಯಗಳು ಸದ್ಯದಲ್ಲೇ ಆರಂಭವಾಗುವ ನಿರೀಕ್ಷೆಯಿದೆ.

ಹೊಸ ಮಂಗಳೂರು ಬಂದರದ ಸಮೀಪದಲ್ಲಿ ಈಗಾಗಲೇ 400 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಬೆಂಗಳೂರು, ಮದರಾಸ್ ಮಧ್ಯೆ ಹೆಚ್ಚು ವಿಮಾನ ಸಂಚಾರ ವ್ಯವಸ್ಥೆ

ಮದರಾಸ್, ಜೂ. 21– ಮದರಾಸ್ ಮತ್ತು ಬೆಂಗಳೂರು ನಡುವೆ ಇಂಡಿಯನ್ ಏರ್ ಲೈನ್ಸ್ ಸಂಸ್ಥೆಯು ಜೂನ್ 23 ರಿಂದ ವಾರದಲ್ಲಿ ಇನ್ನೂ ನಾಲ್ಕು ಬಾರಿ ಹೆಚ್ಚಿಗೆ ವಿಮಾನ ಸಂಚಾರ ಏರ್ಪಡಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.