ಸಾರ್ವಜನಿಕ ಪ್ರಾವಿಡೆಂಟ್ ಫಂಡ್ ಯೋಜನೆ:ಜುಲೈ ತಿಂಗಳಿಂದ ಪ್ರಾರಂಭ
ನವದೆಹಲಿ, ಜೂ. 23– ಸಾರ್ವಜನಿಕ ಕ್ಷೇಮ ನಿಧಿ (ಪಬ್ಲಿಕ್ ಪ್ರಾವಿಡೆಂಟ್ ಫಂಡ್) ಯೋಜನೆ ಜುಲೈ ಒಂದರಿಂದ ಜಾರಿಗೆ ಬರುವುದು.
ಯೋಜನೆಯ ವಿವರಗಳನ್ನುಳ್ಳ ಪ್ರಕಟಣೆಯೊಂದನ್ನು ಕೇಂದ್ರ ಸರಕಾರ ಹೊರಡಿಸಿದೆ. ಭಾರತದ ಸ್ವೇಟ್ ಬ್ಯಾಂಕ್ ಶಾಖೆಗಳು ಮತ್ತು ಅದರ ಅಂಗ ಸಂಸ್ಥೆಗಳು ಕ್ಷೇಮನಿಧಿಗೆ ವಂತಿಗೆಯನ್ನು ಸಾರ್ವಜನಿಕರಿಂದ ಜುಲೈ 1 ರಿಂದ ತೆಗೆದುಕೊಳ್ಳುವುವು.
ಸಮಾಜವಾದ: ನಾಯಕರ ನಿಲುವು ವಿದ್ಯಾರ್ಥಿಗಳಿಗೆ ಅತೃಪ್ತಿ
ಮದರಾಸ್, ಜೂ. 18– ಸಮಾಜ ವಾದದಲ್ಲಿ ವಿದ್ಯಾರ್ಥಿಗಳಿಗೆ ನಿರಾಶೆಯಾಗಿದ್ದರೂ ಉತ್ಸಾಹ ಕುಗ್ಗಿಲ್ಲ. ಇಂದು ವಿದ್ಯಾರ್ಥಿ
ಗಳಿಗಲ್ಲ, ಕೆಲವು ನಾಯಕರುಗಳಿಗೆ ಸಮಾಜವಾದದ ತರಬೇತಿ ಅಗತ್ಯವಾಗಿದೆ.
ಇದು ಶ್ರೀರಂಗದಲ್ಲಿ ಏಳು ದಿನಗಳ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಪ್ರತಿಕ್ರಿಯೆ.
ಭಾರತದಲ್ಲೇ ಮೊದಲನೆಯದಾದ, ವಿದ್ಯಾರ್ಥಿಗಳಲ್ಲಿ ಸಮಾಜವಾದಿ ಚಿಂತನೆಯನ್ನು ಪ್ರಬೋದಿಸುವ ಈ ಶಿಬಿರವನ್ನುದ್ದೇಶಿಸಿ ಮಾಜಿ ಕಾಂಗ್ರೆಸ್ ಅಧ್ಯಕ್ಷ ಶ್ರೀ ಕಾಮರಾಜ್, ಸರ್ವಶ್ರೀ ಕೃಷ್ಣಮೆನನ್, ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಶ್ರೀ ಸುಬ್ರಹ್ಮಣಂ, ಅಶೋಕ ಮೆಹತಾ, ವಿ.ಕೆ.ಆರ್.ವಿ. ರಾವ್, ಡಾ. ಚಂದ್ರಶೇಖರ್ ಮತ್ತು ಮಾಳವೀಯ ಇವರುಗಳು ಮಾತನಾಡಿದರು.
ತಜ್ಞರ ಅಭಯ: ‘ಕೊಯ್ನಾ ಅಣೆಕಟ್ಟೆಗೆ ವಿಪತ್ತಿಲ್ಲ’
ಬೆಂಗಳೂರು, ಜೂ. 23– ಕೊಯಿನಾ ಭೂಕಂಪದ ನಂತರ ಕೆಲವು ವಿದೇಶಿಯರೂ ಕೂಡಿದ್ದ ತಜ್ಞರ ಸಮಿತಿಯು ಸ್ಥಳಕ್ಕೆ ಭೇಟಿಯಿತ್ತು ಕೊಯಿನಾ ಅಣೆಕಟ್ಟೆಗೆ ಅಪಾಯವಿಲ್ಲವೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.