ADVERTISEMENT

ನಿರಂತರ ಕಿತ್ತಾಟ...

ಎ.ಎಸ್.ಗೋಪಾಲಕೃಷ್ಣ ಮೈಸೂರು
Published 27 ಸೆಪ್ಟೆಂಬರ್ 2018, 19:45 IST
Last Updated 27 ಸೆಪ್ಟೆಂಬರ್ 2018, 19:45 IST

ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಹೆಚ್ಚು–ಕಡಿಮೆ ಕುರ್ಚಿ ಭದ್ರ ಮಾಡಿಕೊಳ್ಳುವುದರಲ್ಲೇ ತಲ್ಲೀನರಾಗಿದ್ದಾರೆ. ರೈತರ ಸಾಲ ಮನ್ನಾ ಮಾಡಿದ್ದೇವೆಂದು ಹೇಳಿದರು. ಆದರೆ ರೈತರ ಆತ್ಮಹತ್ಯೆ ನಿಂತಿಲ್ಲ. ಸಾಲ ಮನ್ನಾವೊಂದೇ ಪರಿಹಾರವಲ್ಲ ಅನ್ನುವುದು ಸಾಬೀತಾಗಿದೆ. ವಿರೋಧ ಪಕ್ಷದವರೇ ಆಗಲಿ, ಆಡಳಿತ ಪಕ್ಷದ ರಾಜಕಾರಣಿಗಳೇ ಆಗಲಿ, ನಾಲ್ಕು ತಿಂಗಳಿಂದ ಅಧಿಕಾರಕ್ಕಾಗಿ, ಸ್ಥಾನಮಾನಕ್ಕಾಗಿ ಹೋರಾಡುತ್ತಿರುವುದು ಕಾಣಬರುತ್ತಿದೆಯೇ ವಿನಾ ಅಭಿವೃದ್ಧಿಯ ಹಂಬಲ ಮಾತ್ರ ಕಾಣಸಿಗದು.

ಅಭಿವೃದ್ಧಿ ಪರ ಕಾರ್ಯಗಳು ನಡೆಯುತ್ತಲೇ ಇಲ್ಲ. ಮೂರೂ ಪ್ರಧಾನ ಪಕ್ಷಗಳ ಮುಖಂಡರು 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಯಾವ ಮುಖ ಹೊತ್ತುಕೊಂಡು ಮತ ಕೇಳುತ್ತಾರೋ ಗೊತ್ತಾಗುತ್ತಿಲ್ಲ. ಒಬ್ಬರ ಕುರ್ಚಿಯನ್ನು ಮತ್ತೊಬ್ಬರು ಎಳೆಯುವ ಹೊಲಸು ರಾಜಕಾರಣ ಯಾರಿಗೆ ಬೇಕು ಅಂತ ಕೇಳಲಾರದ ಪರಿಸ್ಥಿತಿ ಮತದಾರನದು. ಸರಿಸುಮಾರು ₹48 ಸಾವಿರ ಕೋಟಿ ಸಾಲ ಮನ್ನಾ ಅಂದರೆ ಅಭಿವೃದ್ಧಿ ಕಾರ್ಯಕ್ಕೆ ಹಣ ಎಲ್ಲಿದೆ? ವೃಥಾ ಆರೋಪ, ಪ್ರತ್ಯಾರೋಪಗಳಲ್ಲೇ ಕಾಲ ದೂಡಲಾಗುತ್ತಿದೆ. ಅಭಿವೃದ್ಧಿ ಕಾರ್ಯ ಎಂದು ಆರಂಭವಾಗುವುದೋ ಕಾದು ನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT